Home » ಕನ್ನಡ ಮನೆ – ಮನದ ಭಾಷೆಯಾಗಲಿ – ನಾಗರಾಜ ವೈದ್ಯ
 

ಕನ್ನಡ ಮನೆ – ಮನದ ಭಾಷೆಯಾಗಲಿ – ನಾಗರಾಜ ವೈದ್ಯ

by Kundapur Xpress
Spread the love

ಕುಂದಾಪುರ : ಹೃದಯದ ಭಾಷೆ, ಕನಸಿನ ಭಾಷೆ, ಬದುಕಿನ ಭಾಷೆಯಾದ ಕನ್ನಡ ಭಾಷೆಗಳಲ್ಲಿಯೇ ಶ್ರೀಮಂತ ಭಾಷೆಯಾಗಿದ್ದು ಕನ್ನಡಿಗರು ಕನ್ನಡವನ್ನು ಮನೆ – ಮನದ ಭಾಷೆಯನ್ನಾಗಿಸಿಕೊಂಡಾಗ ಕನ್ನಡದ ನೆಲೆ ಭದ್ರವಾಗಿ ಬೆಲೆ ಹೆಚ್ಚುತ್ತದೆಂದು ನಾಗರಾಜ ವೈದ್ಯ ಹೇಳಿದರು. ಅವರು ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡದೇವಿ ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ಧ ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಇವರು ದೈನಂದಿನ ವ್ಯವಹಾರಗಳಲ್ಲಿ ಕನ್ನಡವನ್ನು ಹೆಚ್ಚೆಚ್ಚು ಬಳಸಿದಾಗ ಕನ್ನಡವನ್ನು ಉಳಿಸುವುದರೊಂದಿಗೆ ನಾವು ಬೆಳೆಯಬಹುದೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವೈಷ್ಣವಿ ಮತ್ತು ತಂಡದವರು ನಾಡಗೀತೆಯನ್ನು ಹಾಡಿದರು. ಗ್ರಂಥಪಾಲಕ ರವಿಚಂದ್ರ ಹೆಚ್.ಎಸ್. ಸ್ವಾಗತಿಸಿದರೆ, ಭೌತಶಾಸ್ತç ಸಹಾಯಕ ಪ್ರಾಧ್ಯಾಪಕ ರಂಜಿತ್ ವಂದಿಸಿದರು. ತೃತೀಯ ಬಿ.ಸಿ.ಎ. ಪ್ರದೀಪ್ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಕನ್ನಡ ಗೀತೆಗಳ ಗುಂಪು ಗಾಯನ ನಡೆಯಿತು.

 

Related Articles

error: Content is protected !!