Home » ಅರ್ಹ ಫಲಾನುಭವಿಗಳಿಗೆ 94 ಸಿಯಡಿ ಹಕ್ಕು ಪತ್ರವನ್ನ ವಿತರಣೆ
 

ಅರ್ಹ ಫಲಾನುಭವಿಗಳಿಗೆ 94 ಸಿಯಡಿ ಹಕ್ಕು ಪತ್ರವನ್ನ ವಿತರಣೆ

ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ವಿತರಣೆ

by Kundapur Xpress
Spread the love

ಕುಂದಾಪುರ : ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರಕಾರಿ ಜಾಗದಲ್ಲಿ ಹಲವಾರು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಾಗಿರುವ ಒಟ್ಟು 25 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದರು

 ಅವರು ಮಾತನಾಡಿ ವಾಸ್ತವ್ಯದ ಹಕ್ಕುಪತ್ರ ಎಲ್ಲರಿಗೂ ಅಗತ್ಯವಾಗಿ ದೊರಕಬೇಕು. 94 ಸಿ. ಯಡಿ ಅರ್ಜಿದಾರರು ಹಕ್ಕು ಪತ್ರ ವಂಚಿತರಾಗದೆ ಉಳಿದು ಕೊಳ್ಳಬಾರದು ಎಂಬ ಉದ್ದೇಶದಿಂದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಹಕ್ಕು ಪತ್ರ ಒದಗಿಸಲಾಗಿದೆ ಎಂದರು

ಕುಂದಾಪುರ ತಾಲೂಕಿನ 12 ಗ್ರಾಮಗಳ ಒಟ್ಟು 25 ಜನ ಅರ್ಹ ಫಲನುಭವಿಗಳಿಗೆ ಹಕ್ಕು ಪತ್ರ ಒದಗಿಸಲಾಗಿದ್ದು ಹೆಸ್ಕುತ್ತೂರು 02, ಗೋಪಾಡಿ 01, ಅಮಾಸೆಬೈಲ್ 01, ಉಳ್ತೂರು 02, ಹೊಂಬಾಡಿ ಮಂಡಾಡಿ 02, ವಕ್ವಾಡಿ 03, ಹಾಲಾಡಿ 04, ಹಾರ್ದಳ್ಳಿ ಮಂಡಳ್ಳಿ 03, ಹಳ್ಳಾಡಿ ಹರ್ಕಾಡಿ 01, ಕುಂಭಾಶಿ 01, ಹೆಂಗಾವಳ್ಳಿ 01, ಕಾಳಾವರ 04, ಗ್ರಾಮದ ಫಲಾನುಭವಿಗಳು ತಮ್ಮ ವಾಸ್ತವ್ಯದ ಮನೆಯಡಿಯ ಭೂಮಿ ಹಕ್ಕು ಪಡೆದುಕೊಂಡರು.
ಈ ಸಂದರ್ಭದಲ್ಲಿ ಕುಂದಾಪುರ ತಹಶೀಲ್ದಾರಾದ ಪ್ರದೀಪ್ ಕುರುಡೇಕರ್, ಸಂಬಂಧಪಟ್ಟ ಅಧಿಕಾರಿ ವರ್ಗ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು

 

Related Articles

error: Content is protected !!