ಮಂಗಳೂರು : ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಶನಿವಾರ ಮುಸ್ಸಂಜೆ ಸೇರಿದ್ದ ಜನಸ್ತೋಮವನ್ನು ಬಣ್ಣದ ಪಟಗಳು ಮೋಡಿ ಮಾಡಿಬಿಟ್ಟವು. ಒಂದನ್ನೊಂದು ಹಿಂದಿಕ್ಕಿ ವೈಯ್ಯಾರ ಬೀರುತ್ತಾ ಸಾಗಿದ ಬಣ್ಣ ಬಣ್ಣದ ಗಾಳಿಪಟಗಳು ಆಗಸದ ಅಂಗಣದಲ್ಲೊಂದು ರಂಗು ರಂಗಿನ ಚಿತ್ತಾರ ಮೂಡಿಸಿದವು. ಚೆಂದ ಚೆಂದದ ಗಾಳಿಪಟಗಳು ಬಾನ ತುಂಬೆಲ್ಲಾ ಮಿನುಗುತ್ತಿದ್ದರೆ ಬಾನಾಡಿಗಳ ಜೊತೆ ಬೆರೆತಂತೆಯೇ ಎಂದು ಭಾಸವಾಗುತ್ತಿತ್ತು. ನೋಡುವ ಕಣ್ಣುಗಳಂತೂ ಕಣ್ಣಾಲಿಗಳನ್ನು ಮುಚ್ಚದೆ ಆ ಸಂಭ್ರಮವನ್ನು ಸವಿದವು. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಗಾಳಿಪಟ ಉತ್ಸವ ಸಾರ್ಥಕ್ಯ ಕಂಡಿತು
ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಶನಿವಾರ, ಭಾನುವಾರ ಆಯೋಜನೆಯಾಗಿರುವ ಗಾಳಿಪಟ ಉತ್ಸವಕ್ಕೆ ಮೊದಲ ದಿನವಾದ ಶನಿವಾರವೇ ಸಾವಿರಾರು ಮಂದಿ ಸಾಕ್ಷಿಯಾದರು. ದೇಶ ವಿದೇಶಗಳ ನೂರಾರು ವೈವಿಧ್ಯಮಯ, ಬಹು ಅಪರೂಪದ ಗಾಳಿಪಟಗಳನ್ನು ನೋಡಿ ಜನರು ಪುಳಕಗೊಂಡರು.
ಗಾಳಿಪಟ ಉತ್ಸವದಲ್ಲಿ ಗ್ರೀಸ್, ಯುಕೆ, ಜರ್ಮನಿ, ಇಂಡೋನೇಷ್ಯಾ, ನೆದರ್ ಲ್ಯಾಂಡ್ಮಾ ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳಿಂದ ನುರಿತ ಗಾಳಿಪಟ ಹಾರಾಟಗಾರರು ಪಾಲ್ಗೊಂಡಿದ್ದಾರೆ.