79
ಕುಂದಾಪುರ : ತೆಂಕು ಹಾಗೂ ಬಡಗುತಿಟ್ಟಿನ ಮೇರು ಯಕ್ಷಗಾನ ಕಲಾವಿದ ಕೋಡಿ ಕುಷ್ಟ ಗಾಣಿಗ (78 ವರ್ಷ) ರವರು ಗುರುವಾರ ಸ್ವಗೃಹದಲ್ಲಿ ನಿಧನರಾದರು.ಅವರಿಗೆ ಪತ್ನಿ, ಪುತ್ರಿ, ಮೂವರು ಪುತ್ರರು ಇದ್ದಾರೆ
ಬಡಗುತಿಟ್ಟಿನ ಹಲವು ಮೇಳಗಳಲ್ಲಿ ಸೇವೆ ಸಲ್ಲಿಸಿ ಕಟೀಲು ಮೇಳದಲ್ಲಿ ಬರೋಬ್ಬರಿ ಎರಡು ದಶಕ ತಿರುಗಾಟ ನಡೆಸಿ ಕಟೀಲು ಕ್ಷೇತ್ರ ಮಹಾತ್ಮೆಯ ನಂದಿನಿ ಪಾತ್ರದ ಮೂಲಕ ಜನಮನ ಸೂರೆಗೊಂಡಿದ್ದರು. ದೇವಿಮಹಾತ್ಮೆಯ ದೇವಿ ಪಾತ್ರಕ್ಕೆ ಜೀವ ತುಂಬಿದವರು. ಈ ಕಲಾಸೇವೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಉಡುಪಿ ಕಲಾರಂಗ, ಹಾರಾಡಿ ರಾಮಗಾಣಿಗ, ಯಕ್ಷಧ್ರುವ ಪಟ್ಲ ಪ್ರತಿಷ್ಠಾನ, ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರಶಸ್ತಿ, ಶ್ರೀಕ್ಷೇತ್ರ ಕೋಡಿ ಪ್ರಶಸ್ತಿಗಳು ಇವರಿಗೆ ಒಲಿದು ಬಂದಿದೆ

