ಕೊಲ್ಲೂರು : ಮಾಂಗಲ್ಯ ಭಾಗ್ಯ ಯೋಜನೆಯಡಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ 5 ಜೋಡಿಗಳಿಗೆ ಕಂಕಣ ಭಾಗ್ಯ ಬುಧವಾರ ನೆರವೇರಿತು. ಉಚಿತ ಸಾಮೂಹಿಕ ವಿವಾಹದಲ್ಲಿ ವರನಿಗೆ ಹೂವಿನ ಹಾರ, ಮದುವೆ ಬಟ್ಟೆಗಾಗಿ ತಲಾ 5 ಸಾವಿರ ರೂ. ವಧುವಿಗೆ ಹೂವಿನಮಾಲೆ, ಸೀರೆ ಕುಪ್ಪಸಕ್ಕಾಗಿ ತಲಾ 10 ಸಾವಿರ ಎಲ್ಲ ವಧುಗಳಿಗೆ ಚಿನ್ನದ ಸರ, ಎರಡು ಚಿನ್ನಾಭರಣಗಳು ಮತ್ತು 40 ಸಾವಿರ ರೂ.ದಂತೆ ಪ್ರತಿ ಜೋಡಿಗೆ ಒಟ್ಟು 55 ಸಾವಿರ ರೂ. ಮೊತ್ತ ನೀಡಲಾಯಿತು
ದೇವಳದ ಅರ್ಚಕ ಗಜಾನನ ಜೋಯಿಸರು ಮದುವೆ ಶಾಸ್ತ್ರದ ಧಾರ್ಮಿಕ ವಿಧಿ ನೆರವೇರಿಸಿದರು. ಕೊಲ್ಲೂರು ಗ್ರಾಪಂ ಅಧ್ಯಕ್ಷೆ ವನಿತಾ ಯು.ಶೇರೆಗಾರ್, ಉಪಾಧ್ಯಕ್ಷ ನಾಗೇಶ್, ದೇವಳದ ಆಡಳಿತಾಧಿಕಾರಿ ರಶ್ಮೀ ಎಸ್ ಆರ್ ಉಡುಪಿ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಪ್ರಶಾಂತ್ ಕುಮಾರ ಶೆಟ್ಟಿ, ಬೈಂದೂರು ತಹಸೀಲ್ದಾರ ಪ್ರದೀಪ್, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಪುಷ್ಪಲತಾ ಉಪಸ್ಥಿತರಿದ್ದರು