ಕುಂದಾಪುರ: ಕೊಂಕಣಿ ಖಾರ್ವಿ ಸಮಾಜದ ವಿರುದ್ಧ ಕೆಲವರು ನಿರಂತರ ಅವಹೇಳನ ಮಾಡುತ್ತಾ ಬಂದಿದ್ದಾರೆ. ಅಮಾಯಕರ ಮೇಲೆ ಕೇಸು ದಾಖಲಿಸುವುದು, ಸಮಾಜದ ಕೆಲವು ವ್ಯಕ್ತಿಗಳು ಆರಾಧ್ಯಕ್ಷೇತ್ರ ಮಹಾಕಾಳಿ ದೇವಸ್ಥಾನ, ವಿದ್ಯಾರಂಗ ಮಿತ್ರ ಮಂಡಳಿ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಸಮಾಜ ಬಹಳಷ್ಟು ನೊಂದುಕೊಂಡಿದೆ. ಕಳೆದ 7 ವರ್ಷಗಳಿಂದ ಸಮಾಜದ ಜನರಿಗೆ ಇವರು ನೀಡುತ್ತಿರುವ ಕಿರುಕುಳದಿಂದ ಬೇಸತ್ತು ಹೋಗಿದ್ದೇವೆ. ಇತ್ತೀಚೆಗೆ ಸಮಾಜದ ಮುಗ್ಧರ ವಿರುದ್ಧ ಮಾನಭಂಗ ಯತ್ನ ಕೇಸು ದಾಖಲಿಸುವ ಮೂಲಕ ಸಮಾಜದ ಘನತೆ ಕುಗ್ಗಿಸುವಂತೆ ಮಾಡಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜದ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಖಾರ್ವಿಕೇರಿ ಮಹಾಕಾಳಿ ದೇವಳದ ಅಧ್ಯಕ್ಷ ಜಯಾನಂದ ಖಾರ್ವಿ ಹೇಳಿದರು ಇಲ್ಲಿನ ತಾಲೂಕು ಕಚೇರಿ ಎದುರು ಕುಂದಾಪುರ ಕೊಂಕಣಿ ಖಾರ್ವಿ ಸಮಾಜದ ನೇತೃತ್ವದಲ್ಲಿ ಗುರುವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಪುರಸಭೆ ನಾಮನಿರ್ದೇಶಿತ ಸದಸ್ಯ ಪ್ರಕಾಶ್ ಖಾರ್ವಿ ಸಮಾಜದ ಪ್ರಮುಖರಾದ ಅರುಣ್ ಖಾರ್ವಿ, ಕೇಶವ ಖಾರ್ವಿ, ಶಂಕರ ನಾಯ್ಕ ಮಾತನಾಡಿದರು. ವಿದ್ಯಾರಂಗ ಅಧ್ಯಕ್ಷ ದಾಮೋದರ ಖಾರ್ವಿ, ವಿದ್ಯಾನಿಧಿ ಯೋ ಜನೆ ಅಧ್ಯಕ್ಷ ದಿನಕರ ಖಾರ್ವಿ, ಪುರಸಭೆ ಸದಸ್ಯರಾದ ಚಂದ್ರಶೇಖರ ಖಾರ್ವಿ, ರಾಘವೇಂದ್ರ ಖಾರ್ವಿ ಹಾಗೂ ಖಾರ್ವಿ ಸಮಾಜದ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು