Home » ಪಾಂಡೇಶ್ವರ – ಕಳಿಬೈಲ್ ಕೊರಗಜ್ಜನ ಸಾನಿಧ್ಯದಲ್ಲಿ ನಡೆಯಿತು ಪವಾಡ..!!!
 

ಪಾಂಡೇಶ್ವರ – ಕಳಿಬೈಲ್ ಕೊರಗಜ್ಜನ ಸಾನಿಧ್ಯದಲ್ಲಿ ನಡೆಯಿತು ಪವಾಡ..!!!

by Kundapur Xpress
Spread the love

ಕೋಟ: ಇಲ್ಲಿನ ಸಾಸ್ತಾನದ ಸಮೀಪ ಪಾಂಡೇಶ್ವರ ಗ್ರಾ.ಪಂ ವ್ಯಾಪ್ತಿಯ ಮೂಡಹಡು ಕಳಿಬೈಲು ಕೊರಗಜ್ಜನ ಸಾನಿಧ್ಯದಲ್ಲಿ ನಿರಂತ ಪವಾಡಗಳು ನಡೆಯುತ್ತಿದ್ದು ಭಕ್ತರ ಮಹಾಪೂರ ಹರಿದುಬರುತ್ತಿದೆ. ಕಳೆದ ವಾರ ನೇಮೋತ್ಸವ ಇನ್ನಿತ ವಾರ್ಷಿಕ ಕಾರ್ಯಕ್ರಮಗಳನ್ನು ನೆರವೆರಿಸಿದ ಮರುದಿನದಲ್ಲೆ ಪವಾಡ ನಡೆದಿರುವುದು ಬೆಳಕಿಗೆ ಬಂದಿದೆ.
ಇತ್ತೀಚಿಗೆ ಕೊಕ್ಕರ್ಣೆ ಕಾಡೂರು ನಿವಾಸಿ ಬೇಬಿ ಹಾಗೂ ಲಕ್ಷೀ  ಎನ್ನುವವರು ತನ್ನ16ಗ್ರಾಂ ಚಿನ್ನದ ಕರಿಮಣಿ ಕಳೆದುಹೋಗಿದ್ದು ಆ ಭಕ್ತರು ಶ್ರೀ ಕ್ಷೇತ್ರವನ್ನು ಸಂದರ್ಶಿಸಿದರು, ಅದರಂತೆ ಅಲ್ಲಿನ ಕೊರಗಜ್ಜನ ಪಧಾನ ಅರ್ಚಕ ಅಭಿಜಿತ್ ಪಾಂಡೇಶ್ವರರ ಅಣತಿಯ ನುಡಿಯಂತೆ ಮನೆಯ ವಾಶ್ ರೂಮ್ ಟಾಯ್ಲೆಟ್‌ನಲ್ಲಿ ಬಿದ್ದಿರುವ ಸಂದೇಶ ನೀಡಿದ್ದು ಅದರಂತೆ ಅದೇ ಟಾಯ್ಲೆಟ್‌ನಲ್ಲೆ 16 ಗ್ರಾಂ ಕರಿಮಣಿ ಸರ ಸಿಕ್ಕಿರುವುದು ಅದನ್ನು ಗುರುವಾರ ಶ್ರೀ ಕ್ಷೇತ್ರ ಕಳಿಬೈಲು ಸಾನಿಧ್ಯದಲ್ಲಿ ಕೊರಗಜ್ಜನಿಗೆ ಪೂಜೆ ಸಲ್ಲಿಸಿ ಕೊಂಡ್ಯೋಯ್ದರು.

ವಾಶ್ ರೂಮ್‌ನಲ್ಲಿ ಹತ್ತು ಬಾರಿ ಹುಡುಕಿದರು ಸಿಗಲಿಲ್ಲ ನಂತರ ಅಜ್ಜನ ಪವಾಡ ಲೀಲೆ
ಇಲ್ಲಿನ ಅಜ್ಜನ ಸಾನಿಧ್ಯಕ್ಕೂ ಬರುವುದಕ್ಕಿಂತ ಮೊದಲು ಹತ್ತು ಬಾರಿ ಟಾಯ್ಲೆಟ್ ಸೇರಿದಂತೆ ವಿವಿಧ ಕಡೆಗಳಲ್ಲಿ ಹುಡುಕಿದರೂ ಸಿಗದ ಚಿನ್ನದ ಕರಿಮಣಿ ಸರ ಕಳಿಬೈಲು ಅಜ್ಜನ ಸಾನಿಧ್ಯದ ನುಡಿಯಂತೆ ಪುನಹ ಹುಡುಕಿ ಸರ ಅಲ್ಲೆ ಇರುವುದನ್ನು ಕಂಡ ಮನೆಯವರು ಬೆರಗಾದರು.ಇದೊಂದು ಅಜ್ಜನ ಪವಾಡವೇ ಎಂಬ ಸಂದೇಶ ಮನೆಯವರಿಂದ ವ್ಯಕ್ತವಾಗಿದೆ.

ಒಂದು ತಿಂಗಳ ಮೊದಲೊಂದು ಪ್ರಕರಣ
ಇದೇ ಕುಟುಂಬಕ್ಕೆ ಸೇರಿದ ಚಿನ್ನದ ಬಳೆಯೊಂದು ಬೆಂಗಳೂರಿನ ಪರಿಸರವೊಂದರಲ್ಲಿ ಕಳೆದುಹೋಗಿತ್ತು ಆ ಸಂದರ್ಭದಲ್ಲಿ ಅಜ್ಜನಿಗೆ ಅತಿ ಪ್ರೀಯವಾದ ಅಗಲು ಸೇವೆ ನೀಡುವ ಹರಕೆ ಹೊತ್ತ ಮರುಗಳಿಗೆಯಲ್ಲೆ ಅಲ್ಲಿನ ಬೇಕರಿಯೊಂದರಲ್ಲಿ ಎದುರು ಸಿಕಿದೆ ಎಂದು ಆ ಕುಟುಂಬ ಮಾಧ್ಯಮಕ್ಕೆ ತಿಳಿಸಿದೆ.ಒಟ್ಟಾರೆ ಈ ಕಲಿಯುಗದಲ್ಲಿ ಕೊರಗಜ್ಜನ ಪವಾಡ ವಸ್ತುಸ್ಥಿತಿ ಅನಾವರಣಗೊಳ್ಳುತ್ತಿರುವುದಂತು ಸತ್ಯವಾಗಿದೆ.

ಈ ಕ್ಷೇತರದಲ್ಲಿ ಸಾಕಷ್ಟು ಪವಾಡಗಳು ನಡೆಯುತ್ತಿದ್ದು ಇಲ್ಲಿನ ಕೊರಗಜ್ಜ ,ತುಳಸಿ ಅಮ್ಮ,ಮಾರಿಕಾಂಬೆ ಸೇರಿದಂತೆ ವಿವಿಧ ದೈವ ದೇವರುಗಳು ಭಕ್ತರ ಇಷ್ಟಾರ್ಥಗಳನ್ನು ನಿಗಿಸುತ್ತಿದೆ.ಇದರ ಭಾಗವಾಗಿ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯನ್ನು ಕಾಣುತ್ತಿದೆ.ನಿನ್ನೆ ನಡೆದ ಪವಾಡಗಳು ಹೊಸದಾಗಿ ಕಂಡಿದ್ದಲ್ಲ ಬದಲಾಗಿ ಸಾಕಷ್ಟು ಇಂಥಹ ಪವಾಡಗಳು ಶ್ರೀ ಕ್ಷೇತ್ರದಲ್ಲಿ ಕಂಡಿದ್ದೇವೆ
ಅಭಿಜಿತ್ ಪಾಂಡೇಶ್ವರ ಕೊರಗಜ್ಜನ ಸಾನಿಧ್ಯದ ಪ್ರಧಾನಾರ್ಚಕ

ಕಲಿಯುಗದ ಕಾರಣಿಕ ದೈವ ಕೊರಗಜ್ಜನ ಎನ್ನುವುದಕ್ಕೆ ನಮ್ಮ ಈ ಪ್ರಕರಣವೇ ಸಾಕ್ಷಿಯಾಗಿದೆ. ಕಳೆದಹೋದ ಚಿನ್ನದ ಸರವನ್ನು ಸಾಕಷ್ಟು ಬಾರಿ ಅದೇ ಸ್ಥಳದಲ್ಲಿ ಹುಡುಕಿದರು ಸಿಗದ ಸರ ಶ್ರೀ ಕ್ಷೇತ್ರದ ನುಡಿಯಂತೆ ಪುನಹ ಅದೇ ಸ್ಥಳದಲ್ಲಿ ಸಿಕ್ಕಿರುವುದು ಅಜ್ಜನ ಪವಾಡ ಎನ್ನದೆ ಇನ್ನೆನು ಹೇಳಲು ಸಾಧ್ಯ ಈ ಕ್ಷೇತ್ರದ ಭಕ್ತರ ಇಷ್ಟಾರ್ಥ ಇಡೇರಿಸುವ ಕ್ಷೇತವಾಗಿ ಕಂಡಿದೆ

   

Related Articles

error: Content is protected !!