Home » ಮಾನವ ಸರಪಳಿಯನ್ನು ಯಶಸ್ವಿಗೊಳಿಸಲು ಮನವಿ
 

ಮಾನವ ಸರಪಳಿಯನ್ನು ಯಶಸ್ವಿಗೊಳಿಸಲು ಮನವಿ

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ

by Kundapur Xpress
Spread the love

ಕೋಟ: ಕೋಟ ಗ್ರಾಮಪಂಚಾಯತ್ ನೇತೃತ್ವದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವದಿನದ ಅಂಗವಾಗಿ ವಿಶೇಷ ಸಭೆಯನ್ನು ಬುಧವಾರ ಕೋಟ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಸಭೆಯ ಕೋಟ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ. ಉಡುಪಿ ಜಿಲ್ಲಾಡಳಿತ ನೇತೃತ್ವದಲ್ಲಿ ನಡೆಯುವ ಪ್ರಜಾಪ್ರಭುತ್ವ ದಿನದಲ್ಲಿ ಸಂಘಸAಸ್ಥೆಗಳು ಹಾಗೂ ಸ್ಥಳೀಯ ಶಾಲಾ ಕಾಲೇಜುಗಳು,ವಿವಿಧ ಇಲಾಖೆಗಳು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕೋಟದಿಂದ ತೆಕ್ಕಟ್ಟೆಯವರೆಗೆ ಮಾನವ ಸರಪಳಿ ರಚಿಸಿ ವಿವಿಧ ಸಂಘ ಸಂಸ್ಥೆಗಳು ಟ್ಯಾಬ್ಲೋ ಸೇರಿದಂತೆ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ಸಹಿತ ವಿವರಿಸಿದರು.
ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಜಿಲ್ಲಾಡಳಿತ ನಿರ್ದೇಶನದ ಈ ಮಾನವ ಸರಪಳಿಯನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು.
ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ,ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಶ್ವನಾಥ್,ಕೋಟ ಮಣೂರು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡೆನಿಸ್ ಬಾಂಝಾ ಇದ್ದರು.ಪಂಚಾಯತ್ ಕಾರ್ಯದರ್ಶಿ ಶೇಖರ್ ಮರವಂತೆ ಸಭೆಯನ್ನು ನಿರ್ವಹಿಸಿದರು.ವಿವಿಧ ಸಂಘಸAಸ್ಥೆಗಳ ಪ್ರಮುಖರು,ಶಾಲಾ ಕಾಲೇಜುಗಳ ಮುಖ್ಯ ಶಿಕ್ಷಕರು,ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭಾಗಿಯಾದರು.

   

Related Articles

error: Content is protected !!