ಕೋಟ : ಮಹಿಳೆ ಸ್ವತಂತ್ರವಾಗಿ ಬದುಕಲು ಇಂಥಹ ಕಲಿಕಾ ತರಬೇತಿ ಸಹಕಾರಿಯಾಗಲಿದೆ ಎಂದು ಕೋಟ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಅಭಿಪ್ರಾಯಪಟ್ಟರು
ಬುಧವಾರ ಕೋಟ ಗ್ರಾಮಪಂಚಾಯತ್ ಸಭಾಂಗಣದಲ್ಲಿ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ ಮಣಿಪಾಲ ಇವರ ನೇತೃತ್ವದಲ್ಲಿ ಪ್ರಕೃತಿ ಸಂಜೀವಿ ಒಕ್ಕೂಟ ಕೋಟ ಗ್ರಾಮಪಂಚಾಯತ್ ಇವರ ಸಹಯೋಗದೊಂದಿಗೆ ಒಂದು ವಾರಗಳ ಸ್ವ ಉದ್ಯೋಗ ಎಂಬ್ರಾಡಿಂಗ್ ತರಬೇತಿ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ ಈ ವೃತ್ತಿಯ ಮೂಲಕ ಸ್ವಾಲಂಬಿ ಬದುಕು ಕಾಣಲು ಸಾಧ್ಯ.ಕಲಿಕೆ ಎಂದಾಕ್ಷಣ ವಿದ್ಯಾರ್ಥಿ ಜೀವನವೇ ಮಾತ್ರವಲ್ಲ ಪ್ರತಿಕ್ಷಣದಲ್ಲಿ ಕಲಿಕೆ ಇರುತ್ತದೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ವಿಧಾನಗಳನ್ನು ಸೃಷ್ಠಿಸಿಕೊಳ್ಳಬೇಕು ಆ ಮೂಲಕವೇ ಯಶಸ್ಚಿ ಜೀವನ ನಿಮ್ಮದಾಗಿಸಬಹುದು.
ಜೀವನದಲ್ಲಿ ತಾಳ್ಮೆ ಅತ್ಯವಶ್ಯಕವಾಗಿ ಬೇಕಾಗುತ್ತದೆ. ಪ್ರತಿಯೊಂದು ಕ್ಷೇತ್ರವು ನಿಂತ ನೀರಾಗದೆ ಹರಿಯುವ ನೀರಾಗಿ ಪರಿರ್ವತೆಗೊಳ್ಳಬೇಕು, ಗ್ರಾಮೀಣ ಮಹಿಳೆಯರು ಸ್ವ ಉದ್ಯೋಗದಲ್ಲಿ ಪೂರ್ಣಪ್ರಮಾಣದಲ್ಲಿ ತೋಡಗಿಸಿಕೊಳ್ಳಲು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಕೃತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಾಲತಿ ಶೇಖರ್ ವಹಿಸಿದ್ದರು.
ಇದೇ ವೇಳೆ ಸುಮಾರು 40ಕ್ಕೂ ಅಧಿಕ ಮಹಿಳೆಯರು ಒಂದುವಾರಗಳ ಎಂಬ್ರಾಡಿಂಗ್ ಡಿಸೈನ್ ತರಬೇತಿ ಪಡೆದರು.ಅವರುಗಳಿಗೆ ಪ್ರಮಾಣಪತ್ರವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ತರಬೇತುದಾರರಾಗಿ ಆರತಿರಾಜ್ ಭಾಗವಹಿಸಿದರು.
ಮುಖ್ಯ ಅಭ್ಯಾಗತರಾಗಿ ವಿಜಯ ಗ್ರಾಮೀಣ ಪ್ರತಿಷ್ಠಾನ ಮುಖ್ಯ ಕಾರ್ಯನಿರ್ವಹಾಧಿಕಾರಿ ಸಚಿನ್ ಹೆಗ್ಡೆ ,
ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ ಉಪನ್ಯಾಸಕ ರಾಘವೇಂದ್ರ ಆಚಾರ್,ಪ್ರಕೃತಿ ಸಂಜೀವಿನಿಒಕ್ಕೂಟದ ಮಾಜಿ ಅಧ್ಯಕ್ಷೆ ಕಲಾವತಿ ಅಶೋಕ್,ಎನ್ ಎಲ್ ಆರ್ ಎಂ ಬ್ರಹ್ಮಾವರ ಇದರ ಸ್ಚಾತಿ,ಕೋಟ ಗ್ರಾ.ಲೆಕ್ಕಿಗ ರಾಘವೇಂದ್ರ ಹಕ್ಲಾಡಿ ಉಪಸ್ಥಿತರಿದ್ದರು. ಕೃಷಿ ಸಖಿ ಮಮತಾ ಸ್ವಾಗತಿಸಿ ಸಂಜೀವಿನಿ ಒಕ್ಕೂಟದ ಪ್ರೇವ ಪ್ರಭಾಕರ್ ಆಚಾರ್ ನಿರೂಪಿದರು. ಸಂಜೀವಿನಿ ಒಕ್ಕೂಟದ ಪಶು ಸಖಿ ರೇಷ್ಮಾ ವಂದಿಸಿದರು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ ಮಣಿಪಾಲ ಇವರ ನೇತೃತ್ವದಲ್ಲಿ ಪ್ರಕೃತಿ ಸಂಜೀವಿ ಒಕ್ಕೂಟ ,ಕೋಟ ಗ್ರಾಮಪಂಚಾಯತ್ ಇವರ ಸಹಯೋಗದೊಂದಿಗೆ ಒಂದು ವಾರಗಳ ಸ್ವ ಉದ್ಯೋಗ ಎಂಬ್ರಾಡಿಂಗ್ ತರಬೇತಿ ಸಮಾರೋಪ ಕಾರ್ಯಕ್ರಮದಲ್ಲಿ ತರಬೇತಿ ಪಡೆದವರಿಗೆ ಪ್ರಮಾಣಪತ್ರವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಕೋಟ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ, ವಿಜಯ ಗ್ರಾಮೀಣ ಪ್ರತಿಷ್ಠಾನ ಮುಖ್ಯ ಕಾರ್ಯನಿರ್ವಹಾಧಿಕಾರಿ ಸಚಿನ್ ಹೆಗ್ಡೆ ,
ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ ಉಪನ್ಯಾಸಕ ರಾಘವೇಂದ್ರ ಆಚಾರ್ ಮತ್ತಿತರರು ಇದ್ದರು.