ಕೋಟ : ಕೋಟ ಮಣೂರು ಸಮೀಪದ ಕರಿಕಲ್ಕಟ್ಟೆಯ ಉದ್ಯಮಿ ಮನೆಗೆ ಐಟಿ, ಪೊಲೀಸರ ಸೋಗಿನಲ್ಲಿ ತಂಡವೊಂದರ ದಾಳಿ ಪ್ರಕರಣ ಕುರಿತ ತನಿಖೆಗೆ ಈಗಾಗಲೇ ಎರಡು ಪ್ರತ್ಯೇಕ ತಂಡ ರಚಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ಅರುಣ್ ತಿಳಿಸಿದ್ದಾರೆ.
ಉದ್ಯಮಿಯ ಮಡದಿಯ ದೂರಿನ ಆಧಾರದಲ್ಲಿ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಗೆ ಬಂದ ತಂಡವು ಉದ್ಯಮಿಯನ್ನು ವಶಕ್ಕೆ ಪಡೆಯಲು ಬಂದ ಐಟಿ ಅಥವಾ ಪೊಲೀಸ್ ಇಲಾಖೆಯ ಅಧಿಕೃತ ಅಧಿಕಾರಿಗಳೇ ಎನ್ನುವುದನ್ನು ಪರಿಶೀಲಿಸಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.