ಕೋಟ : ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿ ವಿಷ್ಣುಮೂರ್ತಿ ನಾವಡ ಒಬ್ಬಂಟಿಯಾಗಿ ವಾಸಿಸುತ್ತಿದ್ದು, ಕೆಲವು ವರ್ಷಗಳಿಂದ ಅರೆ ಬೆತ್ತಲೆಯಾಗಿ ಸಂಚರಿಸುತ್ತಿದ್ದು ಕಾಲಿನಲ್ಲಿ ದೊಡ್ಡ ಗಾಯ ಹೊಂದಿ ಓಡಾಡುತ್ತಿರುವುದರಿಂದ ಗ್ರಾಮದ ಮಹಿಳೆಯರು ಮತ್ತು ಮಕ್ಕಳಲ್ಲಿ ಆತಂಕದ ವಾತವರಣ ಸೃಷ್ಟಿಯಾಗಿತ್ತು.ಈ ಹಿನ್ನಲ್ಲೆಯಲ್ಲಿ ಗ್ರಾಮಸ್ಥರ ದೂರಿನ್ವಯ ಕೋಟ ಪೋಲೀಸ್ ಠಾಣೆ ಸೂಕ್ತ ಕ್ರಮಕ್ಕೆ ಹೊಸ ಬದುಕು ಆಶ್ರಮದ ಮುಖ್ಯಸ್ಥರಾದ ನಿತ್ಯಾನಂದ ಒಳಕಾಡು ಹಾಗೂ ವಿನಯ್ಚಂದ್ರ ಇವರಿಗೆ ಸೂಚಿಸಿ. ನ. 14ರ ಗುರುವಾರ ಕಾರ್ಯಾಚರಣೆ ನಡೆಸಿ ಬಾಳಿಗಾ ಆಸ್ಪತ್ರೆ ಉಡುಪಿಗೆ ಸೂಕ್ತ ಚಿಕಿತ್ಸೆಗೆ ಸೇರಿಸಲಾಗಿದೆ.
ಈ ಸಂದರ್ಭದಲ್ಲಿ ಕೋಟ ಪೋಲೀಸ್ ಠಾಣೆಯ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಗ್ರಾಮ ಪಂಚಾಯತ್ ಸದಸ್ಯರಾದ ಅಂತೋನಿ ಡಿಸೋಜಾ ಹಾಗೂ ಗ್ರಾಮ ಆಢಳಿತಾಧಿಕಾರಿ ಗಿರೀಶ್ ಉಪಸ್ಥಿತರಿದ್ದರು.ಇದೇ ವೆಳೆ ವಿಷ್ಣುಮೂರ್ತಿ ನಾವಡರ ವಾರೀಸುದಾರರು ಕೋಟ ಪೋಲೀಸ್ ಠಾಣೆ ಅಥವಾ ಕೋಡಿ ಗ್ರಾಮ ಪಂಚಾಯತ್ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.