Home » ಮೀನುಗಾರರಿಗೆ ಕೇಂದ್ರ ಸರ್ಕಾರದಿಂದ ಸಿಗುವ ಸೌಲಭ್ಯಗಳಿಗೆ ಸಂಸದರಿಂದ ಸ್ಪಂದನೆ
 

ಮೀನುಗಾರರಿಗೆ ಕೇಂದ್ರ ಸರ್ಕಾರದಿಂದ ಸಿಗುವ ಸೌಲಭ್ಯಗಳಿಗೆ ಸಂಸದರಿಂದ ಸ್ಪಂದನೆ

by Kundapur Xpress
Spread the love

ಕೋಟ : ಕೋಟ ಹೋಬಳಿಯ ಕೋಡಿ ಕನ್ಯಾಣ,ಕೋಟ,ಕೋಟತಟ್ಟು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಮಸ್ತ ಮೀನುಗಾರರಿಗೆ ಕೇಂದ್ರ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಅತೀ ತುರ್ತಾಗಿ ನೀಡುವಂತೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಉಡುಪಿ ಕಿನಾರ ಮೀನುಗಾರರ ಉತ್ಪಾದಕರ ಸಂಸ್ಥೆಯ ಪ್ರಮುಖರು ಇತ್ತೀಚಿಗೆ ಮನವಿ ಸಲ್ಲಿಸಿದ ಹಿನ್ನಲ್ಲೆಯಲ್ಲಿ ಮಣಿಪಾಲದ ರಜತಾದ್ರಿಯ ತಮ್ಮ ಸಂಸದರ ಕಛೇರಿಯಲ್ಲಿ ಸಂಬAಧ ಪಟ್ಟ ರಾಜ್ಯ ಹಾಗೂ ಕೇಂದ್ರ ಮಟ್ಟದ ಅಧಿಕಾರಿಗಳಿಗೆ ಸಂಸದರು ದೂರವಾಣಿ ಮೂಲಕ ಸಂಪರ್ಕಿಸಿ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ನೀಡಲು ಸೂಚಿಸಿದರು.
ಸಂಸದರ ಸೂಚನೆಗೆ ಸ್ಪಂದಿಸಿದ ಸರಕಾರದ ಮೀನುಗಾರಿಕೆ ಮತ್ತು ಪಶುಸಂಗೋಪನೆ ಇಲಾಖೆಯ ಕಾರ್ಯದರ್ಶಿಗಳಾದ ಅಜಯ್ ನಾಗಭೂಷಣ್ ಅವರು ತುರ್ತಾಗಿ ಪರಿಹರಿಸುವುದಾಗಿ ಸಂಸದರಿಗೆ ತಿಳಿಸಿದರು.
ಈ ಸಂಧರ್ಭದಲ್ಲಿ ಉಡುಪಿ ಕಿನಾರ ಮೀನುಗಾರರ ಉತ್ಪಾದಕರ ಸಂಸ್ಥೆಯ ಮುಖ್ಯಸ್ಥರಾದ ಸುದಿನ ಕೋಡಿ,
ಅಮೃತೇಶ್ವರಿ ರೈತ ಉತ್ಪಾದಕರ ಸಂಘದ ಪ್ರಮುಖರಾದ ಬೇಬಿ ಮೆಂಡನ್, ಮೀನುಗಾರ ಮುಖಂಡರು, ಕೋಟತಟ್ಟು ಗ್ರಾಮ ಪಂಚಾಯತಿ ಸದಸ್ಯರಾದ ರವೀಂದ್ರ ತಿಂಗಳಾಯ ಹಾಗು 144 ಮೀನುಗಾರ ಕುಟುಂಬದ ಫಲಾನುಭವಿಗಳು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

 

Related Articles

error: Content is protected !!