Home » ಕೋಟ ವಿವೇಕ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವ ಸಂಭ್ರಮ
 

ಕೋಟ ವಿವೇಕ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವ ಸಂಭ್ರಮ

by Kundapur Xpress
Spread the love

ಕೋಟ : ವಿವೇಕ ವಿದ್ಯಾದೇಗುಲ ಶೈಕ್ಷಣಿಕವಾಗಿ ಶ್ರೇಷ್ಠತೆಯನ್ನು ಹೊಂದಿದೆ ಎಂದು ಮಣಿಪಾಲ ಎಂ.ಐ ಟಿ ಇದರ ಉಪನ್ಯಾಸ ಪ್ರೋ.ಡಾ.ವಾದಿರಾಜ್ ಭಟ್ ಜಿ.ಆರ್ ನುಡಿದರು.  ವಿದ್ಯಾಸಂಸ್ಥೆಯ ವಠಾರದಲ್ಲಿ ಕೋಟ ವಿವೇಕ ವಿದ್ಯಾ ಸಂಸ್ಥೆಗಳ ವಾರ್ಷಿಕ ವಾರ್ಷಿಕೋತ್ಸವ ಸಂಭ್ರಮ ಸಾಫಲ್ಯ -2024 ಕಾರ್ಯಕ್ರಮದಲ್ಲಿ ಮಾತನಾಡಿ ಇಲ್ಲಿ ಶಿಕ್ಷಣ ಪಡೆದ ಅದೆಷ್ಟೊ ಲಕ್ಷಾಂತರ ಮಂದಿ ದೇಶ ವಿದೇಶದಲ್ಲಿ ತನ್ನದೆ ಆದ ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ,ವಿವೇಕ ಶಿಕ್ಷಣಕ್ಕೆ ಸೀಮಿತವಾಗದೆ ಪಠ್ಯೇತರ ಚಟುವಟಿಯಲ್ಲೂ ತನ್ನದೆ ಆದ ಮೇರುಗಳನ್ನು ಹೆಚ್ಚಿಸಿಕೊಂಡಿದೆ,

ಪ್ರಸ್ತುತ ಆಂಗ್ಲಮಾಧ್ಯಮ ಎಂಬ ಶಿಕ್ಷಣದಿಂದ ಜೀವನದ ಸಂಸ್ಕಾರಭರಿತ ಶಿಕ್ಷಣದಿಂದ ವಂಚಿತರಾಗುತ್ತಿರುವು ಇದರಿಂದ ಸಾಂಪ್ರದಾಯಿಕ ಜೀವನಶೈಲಿ ಮರೆತು ಯಾಂತ್ರಿಕೃತ ಜೀವನಕ್ಕೆ ಅಂಟಿಕೊಳ್ಳುವ ಸ್ಥಿತಿ ನಿರ್ಮಾಣಗೊಂಡಿರುವುದಕ್ಕೆ ಬೇಸರ ಹೊರಹಾಕಿದ ಅವರು ಜೀವನದ ಮುಕ್ತಿಗಾಗಿ ವಿದ್ಯೆಯೇ ಅಂತಿಮವಲ್ಲ ಬದಲಾಗಿ ಬದುಕಿನ ಆಯಾಮಕ್ಕೊಸ್ಕರ ಗುಣಮಟ್ಟದ ಜೀವನದ ತಳಹದಿಯನ್ನು ಗಟ್ಟಿಗೊಳಿಸಬೇಕಾದ ಅಗತ್ಯತೆಗಳನ್ನು ಒತ್ತಿಹೇಳಿದರು.ವೇಗವಾಗಿಮುನ್ನುಗ್ಗುತ್ತಿರುವ ಸಮಾಜದಲ್ಲಿ ಆಧುನಿಕತೆ ಮೈತಳದೆ ನಮ್ಮ ಮುಂದೆ ನಿಂತಿದೆ ಆದರೆ ಅದನ್ನು ಅಗತ್ಯತೆಯ ಅನುಸಾರವಾಗಿ ಬಳಸಿಕೊಳ್ಳಬೇಕು, ವಿಶ್ವದಲ್ಲೆ ಭಾರತ ಶೈಕ್ಷಣಿಕ ಸಾಧನೆ ಪಸರಿಸಿಕೊಂಡಿದೆ. ವಿದ್ಯಾರ್ಥಿಗಳಿಗೆ ಕಾಲೇಜು ಜೀವನ ತಪಸ್ಸು ಇದ್ದಂತೆ ಆ ಸಮಯವನ್ನು ಅರ್ಥಪೂರ್ಣವಾಗಿ ಸದ್ಭಳಕೆ ಮಾಡಿಕೊಳ್ಳಿ ಎಂದರು.

ಮಣಿಪಾಲ ಕೆ.ಎಂಸಿ ವೈದ್ಯರಾದ ಡಾ.ನವೀನ್ ಕುಮಾರ್ ತನ್ನ ವೈಭವವನ್ನು ಉಳಿಸಿ ಹೊಸತನವನ್ನು ಮೈಗೂಡಿಸಿಕೊಂಡ ಕನ್ನಡ ಮಾಧ್ಯಮ ಶಾಲೆಯಾಗಿ ಉಳಿಸಿ ಕೊಂಡಿರುವ ಪ್ರೌಢಶಾಲಾ ವಿಭಾಗ ಮತ್ತು ಕಾಲೇಜಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಶಾಲಾ ದಿನಗಳಲನ್ನು ಮೆಲುಕು ಹಾಕಿದರು. ಇದೇ ವೇಳೆ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದ ಮಣಿಪಾಲ ಎಂ.ಐ ಟಿ ಇದರ ಉಪನ್ಯಾಸ ಪ್ರೋ.ಡಾ.ವಾದಿರಾಜ್ ಭಟ್ ಜಿ.ಆರ್ , ಮಣಿಪಾಲ ಕೆ.ಎಂ ಸಿ ವೈದ್ಯರಾದ ಡಾ.ನವೀನ್ ಕುಮಾರ್ ಎ.ಎನ್,ವಿಜ್ಞಾನಿ ಡಾ. ದಿವ್ಯಾ ಅಡಿಗ ಸಾಲಿಗ್ರಾಮ ಇವರುಗಳನ್ನು ವಿಶೇಷವಾಗಿ ಗೌರವ ಸಂಮ್ಮಾನ ನೀಡಲಾಯಿತು.
ಅಧ್ಯಕ್ಷತೆಯನ್ನು ವಿವೇಕ ವಿದ್ಯಾಸಂಘದ ಅಧ್ಯಕ್ಷ ಸಿ.ಎ ಪಿ.ಪ್ರಭಾಕರ ಮಯ್ಯ ವಹಿಸಿ ಅಮೃತ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದ ಸಾಧನೆಗಳನ್ನು ತಿಳಿಸಿ ದಾನಿಗಳನ್ನು ಅಭಿನಂದಿಸಿ,ಮುAದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು .
ಈ ವರ್ಷದ ವಿದ್ಯಾಸಂಸ್ಥೆಯ ಮ್ಯಾಜೀನ್ ರಕ್ಷಾ ಪುಟ ಅನಾವರಣಗೊಳಿಸಲಾಯಿತು.
ಮುಖ ಅಭ್ಯಾಗತರಾಗಿ ವಿದ್ಯಾಸಂಘದ ಕಾರ್ಯದರ್ಶಿ ಎಂ.ರಾಮದೇವ ಐತಾಳ್ ,ಫ್ರೌಢಶಾಲಾ ಮುಖ್ಯ ಶಿಕ್ಷಕರಾದ ಕೆ.ಜಗದೀಶ್ ಹೊಳ್ಳ, ವೆಂಕಟೇಶ ಉಡುಪ,ಆಂಗ್ಲಮಾಧ್ಯಮ ವಿಭಾಗದ ಮುಖ್ಯ ಶಿಕ್ಷಕಿ ಪ್ರೀತಿರೇಖಾ,ವಿದ್ಯಾಸಂಸ್ಥೆಯ ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚೇಂಪಿ ರಮಾನಂದ ಭಟ್ ಉಪಸ್ಥಿತರಿದ್ದರು.ಶಿಕ್ಷಣ ಸಂಸ್ಥೆಯ ವರದಿಯನ್ನು ವಿದ್ಯಾರ್ಥಿಗಳಾದ ನಿಶಾಂತ್ ಕಿಣಿ,ಕೇಶವ ಉಪಾಧ್ಯಾ ವಾಚಿಸಿದರು.ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ್ ನಾವಡ ಸ್ವಾಗತಿಸಿ ಪರಿಚಯಿಸಿದರು.
ಕಾರ್ಯಕ್ರಮವನ್ನು ಉಪನ್ಯಾಸಕಿ ಸುಜಾತ ನಿರೂಪಿಸಿದರು.ಬಾಲಕರ ಪ್ರೌಢಶಾಲಾ ಮುಖ್ಯ ಶಿಕ್ಷಕ ವೆಂಕಟೇಶ ಉಡುಪ ವಂದಿಸಿದರು.

 

Related Articles

error: Content is protected !!