Home » ಮನಸ್ಸಿನ ಕೊಳೆಯನ್ನು ಸ್ವಚ್ಚಗೊಳಿಸುವ ಸಾಬೂನೇ ಸಾಹಿತ್ಯ
 

ಮನಸ್ಸಿನ ಕೊಳೆಯನ್ನು ಸ್ವಚ್ಚಗೊಳಿಸುವ ಸಾಬೂನೇ ಸಾಹಿತ್ಯ

by Kundapur Xpress
Spread the love

ಕೋಟ: ಸಾಹಿತ್ಯ ಎಂದರೆ ಕೇವಲ ಕವನ ಮತ್ತು ಕಥೆಯಲ್ಲ. ಸಾಹಿತ್ಯವು ಮನುಷ್ಯನ ಏಕಾಂತವನ್ನು ದೂರ ಮಾಡುತ್ತದೆ. ಹಕ್ಕಿಗಳಿಗೆ ರೆಕ್ಕೆ ಬಂದಾಗ, ಹಕ್ಕಿಗಳು ರೆಕ್ಕೆಯ ಮೇಲಿನ ಆತ್ಮವಿಶ್ವಾಸದಿಂದ ಹಾರುವಂತೆ, ಕಥೆ-ಕವನಗಳನ್ನು ಓದುವುದರಿಂದ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚುತ್ತದೆ, ಜ್ಞಾನ ಹೆಚ್ಚುತ್ತದೆ. ಆಗ ಆ ವಿದ್ಯಾರ್ಥಿಯು ಯಾವುದೇ ಸಮಸ್ಯೆಗಳನ್ನು ಸುಲಭವಾಗಿ ಎದುರಿಸಬಲ್ಲ. ಸಾಹಿತ್ಯವನ್ನು ಓದುವುದರಿಂದ ವಿದ್ಯಾರ್ಥಿಗಳ ನೈತಿಕ ಮೌಲ್ಯ ಹೆಚ್ಚುತ್ತದೆ. ಅದರ ಪರಿಣಾಮವಾಗಿ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಜೀವನದ ಪ್ರತಿಯೊಂದು ಸಮಸ್ಯೆಗೆ ಪರಿಹಾರ ಸಿಗುತ್ತದೆ. ಸಾಹಿತ್ಯವು ಮನಸ್ಸಿನ ಕೊಳೆಯನ್ನು ತೆಗೆಯುವ ಸಾಬೂನು ಎಂದು ಕಥೆ, ಕವನದ ಮೂಲಕ ವಿದ್ಯಾರ್ಥಿಗಳಿಗೆ ಉಪನ್ಯಾಸಕ ಎಚ್ ಸುಜಯೀಂದ್ರ ಹಂದೆ ತಿಳಿಹೇಳಿದರು.
ಕೋಟದ ವಿವೇಕ ಪದವಿ ಪೂರ್ವಕಾಲೇಜಿನ ಪ್ರೌಢಶಾಲಾ ವಿಭಾಗದ ಸಾಹಿತ್ಯ ಸಂಘದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವಡ ಎಲ್ಲರನ್ನು ಸ್ವಾಗತಿಸಿದರು. ಕಾಲೇಜಿನ ಉಪನ್ಯಾಸಕರಾದ ಪ್ರೇಮಾನಂದ ಮತ್ತು ಶಂಭು ಭಟ್ಟರು ಹಂದೆಯವರನ್ನು ಸಮ್ಮಾನಿಸಿದರು. ಹಿರಿಯ ಶಿಕ್ಷಕ ವೆಂಕಟೇಶ ಉಡುಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಸಂಘದ ಸಂಚಾಲಕಿ ಶ್ರೀಮತಿ ನಳಿನಾಕ್ಷಿ ಧನ್ಯವಾದಗೈದರು. ಸಾಹಿತ್ಯ ಸಂಘದ ಅಧ್ಯಕ್ಷ ವಿದ್ಯಾರ್ಥಿ ಅಮಿತ್ ಕಾರ್ಯಕ್ರಮವನ್ನು ನಿರೂಪಿಸಿದರೆ ನಿಧೀಶ ಭಟ್ಟ ಪ್ರಾರ್ಥಿಸಿದರು.

   

Related Articles

error: Content is protected !!