ಕೋಟ: ಕೋಟದ ವಿವೇಕ ವಿದ್ಯಾಸಂಸ್ಥೆಗಳ ಆವರಣದಲ್ಲಿ ವಿವೇಕ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಹಾಗೂ ಶರಣ ಸಾಹಿತ್ಯ ಪರಿಷತ್, ಉಡುಪಿ ಜಿಲ್ಲಾ ಘಟಕ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಲ್ಲಿ ವಚನ ಹಾಗೂ ಗಮಕ ಕಲೆಗಳ ಪರಿಚಯ ಮಾಡಿಸು ವಚನ ಡಿಂಡಿಮ ಎಂಬ ವಚನಗಳ ಗಾಯನ-ವ್ಯಾಖ್ಯಾನ ಎಂಬ ವಿಶಿಷ್ಟ ಕಾರ್ಯಕ್ರಮವು ಇತ್ತೀಚಿಗೆ ನಡೆಯಿತು. ವಿದ್ವಾನ್ ಶಂಭು ಭಟ್ಟರ ಗಾಯನಕ್ಕೆ ಡಾ. ರಾಘವೇಂದ್ರ ರಾವ್, ಪಡುಬಿದ್ರಿ ಅವರು ವ್ಯಾಖ್ಯಾನ ಗೈದರು. ಸಭೆಯಲ್ಲಿ ಡಾ. ರಾಘವೇಂದ್ರ ರಾವ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ವಚನಗಾಯನದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಭಾಕಾರ್ಯಕ್ರಮದಲ್ಲಿ ಅಭ್ಯಾಗತರಾದ ಡಾ. ನಿರಂಜನ ಚೋಳಯ್ಯ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಸ್ಥೆಯ ಪ್ರಾಂಶುಪಾಲ ಕೆ. ಜಗದೀಶ ನಾವಡ ಸ್ವಾಗತಿಸಿದರು. ಹಿರಿಯ ಅಧ್ಯಾಪಕ ಪ್ರೇಮಾನಂದರು ಧನ್ಯವಾದಗೈದರು. ನಳಿನಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ಅನಂತಾದಿತ್ಯ ಪ್ರಾರ್ಥಿಸಿದರು.