Home » ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ ಕೋಟತಟ್ಟು ತೃತೀಯ ಸ್ಥಾನ
 

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ ಕೋಟತಟ್ಟು ತೃತೀಯ ಸ್ಥಾನ

by Kundapur Xpress
Spread the love

ಕೋಟ : ಬ್ರಹ್ಮಾವರ ತಾಲೂಕಿನಲ್ಲಿ ಸೆಪ್ಟೆಂಬರ್ ತಿಂಗಳ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅತಿ ಹೆಚ್ಚು ಮಾನವ ದಿನಗಳನ್ನು ಸೃಜಿಸಿ ತಾಲೂಕಿನ 27 ಗ್ರಾಮ ಪಂಚಾಯತ್‍ನಲ್ಲಿ ತೃತೀಯ ಸ್ಥಾನವನ್ನು ಕೋಟತಟ್ಟು ಗ್ರಾಮ ಪಂಚಾಯತ್ ತನ್ನದಾಗಿಸಿಕೊಂಡಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಗ್ರಾಮಸ್ಥರಿಗೆ ವೈಯಕ್ತಿಕ ಅನುದಾನ ಒದಗಿಸುವಲ್ಲಿ ಅತ್ಯುತ್ತಮ ಯೋಜನೆಯಾಗಿದ್ದು ಕೃಷಿ ಬಾವಿ,ದನದ ಹಟ್ಟಿ, ಕೋಳಿಗೂಡು, ಗೊಬ್ಬರದ ಗುಂಡಿ, ಎರೆಹುಳು ತೊಟ್ಟಿ, ಬಚ್ಚಲು ಗುಂಡಿ, ಪೌಷ್ಟಿಕ ತೋಟ ಇತ್ಯಾದಿಗಳ ರಚನೆಗೆ ಅವಕಾಶವಿದ್ದು ಗ್ರಾಮಸ್ಥರು 2024-25 ಸಾಲಿನ ಕ್ರಿಯಾ ಯೋಜನೆಗೆ ಅರ್ಜಿ ಸಲ್ಲಿಸುವುದರ ಮೂಲಕ ಈ ಯೋಜನೆ ಲಾಭ ಪಡೆಯಲು ಪಂಚಾಯತ್ ಈ ಮೂಲಕ ಕೋರಿದೆ.

   

Related Articles

error: Content is protected !!