ಕೋಟ: ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಇಲ್ಲಿ ಕಲಾ ವಲಯದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ ಕಲಾವಿದ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಡಾ. ರಾಧಾಕೃಷ್ಣ ಉಪಾಧ್ಯಾಯ ಮೂಡುಬೆಳ್ಳಿ ಇವರ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭ ಇತ್ತೀಚಿಗೆ ನಡೆಯಿತು.
ಸಂಸ್ಥೆಯ ಉಪ ಪ್ರಾಂಶುಪಾಲರಾದ ಚಂದ್ರಶೇಖರ್ ಶೆಟ್ಟಿ ಇವರು ರಾಧಾಕೃಷ್ಣ ಉಪಾಧ್ಯಾಯ ಮೂಡು ಬೆಳ್ಳೆ ದಂಪತಿಗಳನ್ನು ಸನ್ಮಾನಿಸಿ ಬೀಳ್ಕೊಡುತ್ತಾ ಮಾತನಾಡಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಇಲ್ಲಿ ಸುಮಾರು 5 ವರ್ಷ ಹಾಗೂ ಒಟ್ಟು ಸುಮಾರು 37 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುತ್ತಾರೆ ಇವರು 3 ರಾಜ್ಯ ಪ್ರಶಸ್ತಿ ರಾಷ್ಟ್ರಪ್ರಶಸ್ತಿ ಹಾಗೂ ಡಾಕ್ಟರೇಟ್ ಪದವಿಯನ್ನು ಪಡೆದು ರಾಷ್ಟ್ರ ಪ್ರಶಸ್ತಿ ಪಡೆದ ಕರ್ನಾಟಕದ ಏಕೈಕ ಚಿತ್ರಕಲಾ ಶಿಕ್ಷಕರಾಗಿರುತ್ತಾರೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಇಲ್ಲಿ ಇವರ ಹೆಸರು ದಾಖಲಿಸಿದ್ದಾರೆ.ಇಂತಹ ಒಬ್ಬ ಶ್ರೇಷ್ಠ ಕಲಾವಿದ ಶಿಕ್ಷಕರು ನಿವೃತ್ತಿ ಯಾಗುತ್ತಿರುವುದು ವಿದ್ಯಾರ್ಥಿಗಳಿಗೆ ತುಂಬಲಾರದ ನಷ್ಟ ಇವರು ವೃತ್ತಿಯಲ್ಲಿ ನಿವೃತ್ತಿಯಾದರೂ ಪ್ರವೃತ್ತಿಯಲ್ಲಿ ಸದಾ ಕಾರ್ಯಯೋನ್ಮುಖ ರಾಗಿರಲಿ ಎಂದು ಶುಭ ಹಾರೈಸಿದರು. ಪ್ರಾಂಶುಪಾಲರಾದ ಸುಶೀಲ ಹೊಳ್ಳ ಸಂಸ್ಥೆಯಲ್ಲಿನ ಉಪಾಧ್ಯಾಯರ ಕಾರ್ಯ ವೈಖರಿಯನ್ನು ಸ್ಮರಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಉದಯ ಮಡಿವಾಳ.ಎಂ, ಮಂಜುನಾಥ್ ಹೊಳ್ಳ, ರಮಾನಂದ ಹಾಗೂ ಉಪನ್ಯಾಸಕ ಹರೀಶ್ ನಾಯಕ್ ಸಂಸ್ಥೆಯಲ್ಲಿನ ಇವರ ಒಡನಾಟವನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಪದವಿ ಪೂರ್ವ ವಿಭಾಗದ ಎಲ್ಲ ಉಪನ್ಯಾಸಕರು ಹಾಗೂ ಪ್ರೌಢಶಾಲಾ ವಿಭಾಗದ ಶಿಕ್ಷಕರು ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ಜಯಶ್ರೀ ಭಟ್ ಸ್ವಾಗತಿಸಿ ಬಾಬು ಶೆಟ್ಟಿ ವಂದಿಸಿದರು ಕಾರ್ಯಕ್ರಮವನ್ನು ಶಿಕ್ಷಕಿ ಪೂರ್ಣಿಮಾ ನಿರೂಪಿಸಿದರು. ಸನ್ಮಾನ ಪತ್ರವನ್ನು ಶಿಕ್ಷಕಿ ನಾಗರತ್ನ ವಾಚಿಸಿದರು