Home » ಯೋಗದಿಂದ ಸ್ವಸ್ಥ ವ್ಯಕ್ತಿತ್ವ
 

ಯೋಗದಿಂದ ಸ್ವಸ್ಥ ವ್ಯಕ್ತಿತ್ವ

-ಡಾ.ಶಿಲ್ಪ

by Kundapur Xpress
Spread the love

ಕೋಟ: ಯೋಗ ಸಾಧನೆಯಿಂದ ಯೋಗ್ಯತೆ ಸಿದ್ಧಿಸುತ್ತದೆ ಮಾತ್ರವಲ್ಲದೆ ಆರೋಗ್ಯಯುತ ಸ್ವಸ್ಥ ವ್ಯಕ್ತಿತ್ವ ವಿಕಸನಕ್ಕೆ ದಾರಿ ದೀವಿಗೆಯಾಗಿದೆ. ಎಂದು ಕುಂದಾಪುರ ಆಯುಷ್ ಇಲಾಖೆಯ ಆರೋಗ್ಯ ಅಧಿಕಾರಿ ಡಾ.ಶಿಲ್ಪ ಅಭಿಮತ ವ್ಯಕ್ತಪಡಿಸಿದರು.
ಅವರು ಕೆಪಿಎಸ್ ಕೋಟೇಶ್ವರ ಪ್ರೌಢಶಾಲಾ ವಿಭಾಗದ ಎನ್.ಎಸ್.ಎಸ್ ಘಟಕದ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗದಿನಾಚರಣೆಯ ಪೂರ್ವಭಾವಿ ಯೋಗೋತ್ಸವದಲ್ಲಿ ಯೋಗದ ಬಗ್ಗೆ ತರಬೇತಿ ಯುಕ್ತ ಮಾರ್ಗದರ್ಶನ ನೀಡಿ ಮಾತನ್ನಾಡಿದರು.
ಕುಂದಾಪುರ ಲಯನ್ಸ್ ಕ್ಲಬ್‍ನ ಅಧ್ಯಕ್ಷೆ ಶೋಭಾ ಶಿವರಾಂ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿ ‘ಪ್ರಪಂಚವು ಭಾರತದ ಆದರ್ಶಗಳನ್ನು ಅಳವಡಿಸಿಕೊಳ್ಳಲು ಹಂಬಲಿಸುತ್ತಿದ್ದು ಅದರಲ್ಲಿ ಯೋಗ ಶಿಕ್ಷಣ ಮುಂಚೂಣಿಯಲ್ಲಿದೆ.ಅವುಗಳನ್ನು ನಾವು ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ಬಾಳೋಣ ‘ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. . ಶಿಕ್ಷಕ ಉದಯ ಮಡಿವಾಳ.ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಸ್ವಾಗತಿಸಿದರು.ಕುಮಾರಿ ರಚಿತ ವಂದಿಸಿದರು. ಎನ್‍ಎಸ್‍ಎಸ್ ನಾಯಕಿ ಮಹಾಲಕ್ಷ್ಮಿ ನಿರೂಪಿಸಿದರು. ಪ್ರಾಣೇಶ್ ಭಟ್ ಸಂಪನ್ಮೂಲ ವ್ಯಕ್ತಿಗಳನ್ನು ಸಭೆಗೆ ಪರಿಚಯಿಸಿದರು.ಆಯುಷ್ ಇಲಾಖೆಯ ಸುಭಾಸ್ ಉಪಸ್ಥಿತರಿದ್ದರು.ಎನ್ ಎಸ್ ಎಸ್ ಅಧಿಕಾರಿ ರಮಾನಂದ ನಾಯಕ್ ಮತ್ತು ಹಿರಿಯ ದೈ. ಶಿ.ಶಿಕ್ಷಕ ಮಂಜುನಾಥ್ ಹೊಳ್ಳ ಕಾರ್ಯಕ್ರಮವನ್ನು ಸಂಘಟಿಸುವಲ್ಲಿ ಸಹಕರಿಸಿದರು. ಎನ್‍ಎಸ್‍ಎಸ್ ಸ್ವಯಂ ಸೇವಕರ ಉಪಸ್ಥಿತಿಯಲ್ಲಿ ಯೋಗ ಶಿಕ್ಷಣದ ತರಬೇತಿ ನಡೆಯಿತು.

   

Related Articles

error: Content is protected !!