ಬೈಂದೂರು : ಮರವಂತೆ ಸುಬ್ರಹ್ಮಣ್ಯ, ವಿದ್ಯಾಗಣಪತಿ, ನವಗ್ರಹ ದೇವಸ್ಥಾನದಲ್ಲಿ ನಾಗರ ಪಂಚಮಿಯಂದು ನಾಗ ದೇವರಿಗೆ ವಿಶೇಷ ಪೂಜೆ, ಪ್ರಸಾದ ವಿತರಣೆ ಹಾಗೂ 9ನೇ ವರ್ಷದ ನಾಗಾನುಗ್ರಹ ಪ್ರಶಸ್ತಿ ಪ್ರಧಾನ ಸಮಾರಂಭ ದೇವಸ್ಥಾನದ ಆವರಣದಲ್ಲಿ ಜರುಗಿತು
ಉಪ್ಪುಂದ ರಾಘವೇಂದ್ರಸ್ವಾಮಿ ಮಠದ ಸುಭಾಶ್ಚಂದ್ರ ಪುರಾಣಿಕ ನಾಗಾನುಗ್ರಹ ಪ್ರಶಸ್ತಿ ಪ್ರಧಾನ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿಶೇಷ ವ್ಯಕ್ತಿಗೆ ಸನ್ಮಾನಿಸಿದ್ದು ನಮ್ಮೆಲ್ಲರ ಭಾಗ್ಯ ಎಂದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಹೈದರಬಾದ್ ಉದ್ಯಮಿ ಮಾರಣಕಟ್ಟೆಯ ಕರ್ಣ, ಕೊಡುಗೈ ದಾನಿ, ಸಮಾಜಸೇವಕ,ಶಿಕ್ಷಣ ಪ್ರೇಮಿ, ತನ್ನ ದುಡಿಮೆಯ ಅರ್ಧ ಭಾಗಕ್ಕೂ ಹೆಚ್ಚು ಹಣವನ್ನು ಸಮಾಜಕ್ಕೆ ನೀಡುವ ಅತ್ಯುನ್ನತ ವ್ಯಕ್ತಿ
ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರಿಗೆ ನಾಗರ ಪಂಚಮಿಯ ವಿಶೇಷ ದಿನದಂದು ಮಾಜಿ ಶಾಸಕರಾದ ಬಿ ಎಂ ಸುಕುಮಾರ್ ಶೆಟ್ಟಿ ಅವರು ನಾಗಾನುಗ್ರಹ ಪ್ರಶಸ್ತಿ ಪ್ರಧಾನ ನೆರವೇರಿಸಿದರು ಸನ್ಮಾನಿತರಾದ ಮಾರಣಕಟ್ಟೆ ಮಂಜರು ತಮ್ಮ ಹಿತ ನುಡಿಯನ್ನು ಹಂಚಿಕೊಂಡರು.
ಕೋಟೇಶ್ವರದ ವಾಸ್ತು ತಜ್ಞ, ಯಕ್ಷಗಾನ ಪ್ರಸಂಗ ಕರ್ತರು ಹಾಗೂ ಜ್ಯೋತಿಷಿ ಡಾ ಬಸವರಾಜ್ ಶೆಟ್ಟಿಗಾರ್ ನಾಗಾನುಗ್ರಹ ಪ್ರಶಸ್ತಿ ಸಮಾರಂಭ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು ಮರವಂತೆ ಸುಬ್ರಹ್ಮಣ್ಯ, ವಿದ್ಯಾಗಣಪತಿ, ನವಗ್ರಹ ದೇವಸ್ಥಾನದ ಧರ್ಮದರ್ಶಿ ತಿಮ್ಮ ವಿ ದೇವಾಡಿಗ ಪ್ರಾಸ್ತಾವಿಕ ಮಾತನಾಡಿ ದರು
ಗೌರವ ಸಲಹೆಗಾರ ಸಿ.ಎಸ್. ಖಾರ್ವಿ ಕೊಡೇರಿ ಸ್ವಾಗತಿಸಿದರು. ಕೆರ್ಗಾಲ್ ಬನಗಲ್ ಹಾಡಿ ವನದುರ್ಗಾ ದೇವಿ ದೇವಸ್ಥಾನದ ಕಾರ್ಯದರ್ಶಿ ಗೋವಿಂದ ಎಮ್ ಮಟ್ನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.