ಉಡುಪಿ: ಮಕ್ಕಳಿಗೆ ದೇಶದ ನೈಜ ಇತಿಹಾಸ ತಿಳಿಸದಿದ್ದರೆ ನಾವು ಅಪರಾಧಿಗಳಾಗುತ್ತೇವೆ ಕಟ್ಟಡ ನಿರ್ಮಾಣಕ್ಕೆ ತೆರೆ ಬಿದ್ದಿದೆ ಆದರೆ ಕಟ್ಟಡವನ್ನು ಉಳಿಸುವ ಕೆಲಸಕ್ಕೆ ತೆರೆ ಇಲ್ಲ ಇತಿಹಾಸವನ್ನು ಕಂಡಿದ್ದೇವೆ. ಹೀಗಾಗಿ ಭವಿಷ್ಯದ ದೃಷ್ಟಿಕೋನವೂ ಅಗತ್ಯ ಹೀಗಾಗಿ ನಮ್ಮ ಮುಂದಿನ ಪೀಳಿಗೆಯನ್ನು ಸನಾತನಿಗಳಾಗಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥರು ಹೇಳಿದರು
ಅವರು ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ರಾಜಾಂಗಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ದೇಶದಲ್ಲಿ ಹಿಂದುಗಳು ಬಹುಸಂಖ್ಯಾತರಾಗಿದ್ದಷ್ಟು ಕಾಲ ರಾಮ ಮಂದಿರ ಆಚಂದ್ರಾರ್ಕವಾಗಿ ಉಳಿಯಲು ಸಾಧ್ಯ. ಇಲ್ಲದಿದ್ದರೆ ಅಪಘಾನಿಸ್ತಾನದಲ್ಲಿ ಬುದ್ಧನಿಗಾದ ಸ್ಥಿತಿಯೇ ಮತ್ತೆ ಮರುಕಳಿಸಬಹುದು ಎಂದು ನುಡಿದರು