ಕೋಟ : ಶಾಲಾ ಶಿಕ್ಷಕರ ಗುಣಮಟ್ಟದ ಶಿಕ್ಷಣ ಆದರಿಸಿ ಮಕ್ಕಳ ಪೋಷಕರು ಸರಕಾರಿ ಶಾಲೆಯತ್ತ ಗಮನ ಹರಿಸುತ್ತಾರೆ ಅದೇ ರೀತಿ ಇಂದು ಸರಕಾರಿ ಶಾಲೆಗಳು ಬೆಳವಣಿಗೆ ಹಾದಿಯತ್ತ ಸಾಗುತ್ತಿದೆ ಇದು ಆಶಾದಾಯಕ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ನುಡಿದರು.
ಗುರುವಾರ ಬ್ರಹ್ಮಾವರ ವಲಯದ ಚಿತ್ರಪಾಡಿ ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಿ.ಎಂ.ಶ್ರೀ ಯೋಜನೆಯಡಿ ಮಂಜೂರಾದ ಎಲ್.ಕೆ.ಜಿ. ತರಗತಿ ಉದ್ಘಾಟನೆ ಹಾಗೂ ಗೀತಾನಂದ ಫೌಂಡೇಶನ್ ಕೊಡಮಾಡಿದ ನೋಟ್ ಬುಕ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಪ್ರಸ್ತುತ ಹೆಚ್ಚಿನ ಸರಕಾರಿ ಅನುದಾನಿತ ಶಾಲೆಗಳ ಅಭಿವೃದ್ಧಿಯಲ್ಲಿ ಹಳೇ ವಿದ್ಯಾರ್ಥಿಗಳ ಪಾತ್ರ ಹಾಗೂ ದಾನಿಗಳ ಸಹಕಾರ ಗಣನೀಯವಾದದ್ದು ,ಚಿತ್ರಪಾಡಿ ಶಾಲೆ ಮಕ್ಕಳ ಸಂಖ್ಯೆ ಏರುಗತಿ ಕಂಡಿರುವುದು ಶ್ಲಾಘನೀಯ ಕಾರ್ಯ ಇಲ್ಲಿನ ಶಿಕ್ಷಕರ ಹಾಗೂ ಶಾಲಾಭಿವೃದ್ಧಿ ಸಮಿತಿ ಕಾರ್ಯವನ್ನು ಪ್ರಶಂಸಿದರು.ಕನ್ನಡ ಮಾಧ್ಯಮ ಸರಕಾರಿ ಶಾಲೆಗಳ ಅಭಿವೃದ್ಧಿ ಸರಕಾರದ ಕದ ತಟ್ಟಿದ್ದೇವೆ ಅನುದಾನ ಒದಗಿಸಿದರೆ ಶಾಲಾ ಕಟ್ಟಡ ಮೇಲ್ದರ್ಜೆಗೆ ಸಹಕಾರಿಯಾಗಲಿದೆ ಎಂದರು.
ಇದೇ ವೇಳೆ ಎಲ್ ಕೆಜಿ ತರಗತಿ ಕೊಠಡಿಯನ್ನು ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು. ಶಾಲಾ ಹಳೇ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ರಾಘವೇಂದ್ರ ಆಚಾರ್ ಕಪಾಟನ್ನು ಉದ್ಘಾಟಿಸಿದರು. ಶಾಲಾ ಅಭಿವೃದ್ಧಿ ನೆರವು ನೀಡಿದ ದಾನಿಗಳಾದ ರಂಗನಾಥ್,ರಾಘವೇಂದ್ರ ಆಚಾರ್,ಉದಯ್ ನಾಯಕ್ ಇವರುಗಳಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಕಿಶನ್ ಹೆಗ್ಡೆ ಕೊಳ್ಳೆಬೈಲು, ಶ್ರೀ ಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮ ಇದರ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್ ಕಾರಂತ,ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ವಕೀಲರಾದ ಯೋಗೀಶ್ ಕುಮಾರ್,ಇಂಜಿನಿಯರ್ ನಾಗರಾಜ ಸೋಮಯಾಜಿ ಪಾರಂಪಳ್ಳಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಗಣಪತಿ,ಸಾಲಿಗ್ರಾಮ ಪಟ್ಟಣಪಂಚಾಯತ್ ಸದಸ್ಯೆ ರತ್ನಾ ನಾಗರಾಜ ಗಾಣಿಗ,ಪಟ್ಟಣಪಂಚಾಯತ್ ಸದಸ್ಯ ರಾಜು ಪೂಜಾರಿ,ಶಿಕ್ಷಣ ಇಲಾಖೆಯ ಸಂಯೋಜಕ ಪ್ರಕಾಶ್ ಬಿ.ಬಿ.,ಸಿಆರ್‍ಪಿ ಸವಿತಾ ಆಚಾರ್,ಕಾರ್ತಟ್ಟು ಅಘೋರೇಶ್ವರ ದೇಗುಲದ ಅಧ್ಯಕ್ಷ ಚಂದ್ರಶೇಖರ್ ಕಾರಂತ್,ಶಾಲಾ ಪ್ರೋತ್ಸಾಹಕರಾದ ಶಿವರಾಮ ಉಡುಪ, ಶಾಲಾ ಅಕ್ಷರರಥ ಸಮಿತಿ ಅಧ್ಯಕ್ಷ ನಾಗರಾಜ್ ಗಾಣಿಗ,ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಶಂಕರ್ ದೇವಾಡಿಗ,ಉದ್ಯಮಿಗಳಾದ ಅರುಣ್ ಕುಂದರ್,ಭೋಜ ಪೂಜಾರಿ,ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ ಉಪಾಧ್ಯ ಮತ್ತಿತರರು ಉಪಸ್ಥಿತರಿದ್ದರು, ಶಾಲಾ ಮುಖ್ಯ ಶಿಕ್ಷಕಿ ಶಾಲಿನಿ ಸ್ವಾಗತಿಸಿದರು.ಕಾರ್ಯಕ್ರಮವನ್ನು ಶಾಲಾ ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ನಿರೂಪಿಸಿ,ಶಿಕ್ಷಕಿ ಮಾಲಿನಿ ವಂದಿಸಿದರು.