ಕೋಟ: ಸ್ಥಳೀಯ ಮೂಲಭೂತ ಸೌಕರ್ಯಗಳ ದಾನಿಗಳ ಸಹಕಾರ ಅತ್ಯಗತ್ಯ ಎಂದು ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ನುಡಿದರು. ಗುರುವಾರ ಇಲ್ಲಿನ ಸಾಸ್ತಾನದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಮೆರಿಕೆರ್ಸ್ ಇಂಡಿಯಾ ಫೌಂಡೇಶನ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಳ್ಳುವ ವಿವಿಧ ವಾಡ್೯,ತುರ್ತು ಚಿಕಿತ್ಸಾ ಕೊಠಡಿ ಕಟ್ಟಡಗಳಿಗೆ ಶಿಲಾನ್ಯಾಸ ನೆರವೆರಿಸಿ ಮಾತನಾಡಿ ಸರಕಾರಿ ಆಸ್ಪತ್ರೆಗಳ ಅಭಿವೃದ್ಧಿಯಲ್ಲಿ ಖಾಸಗಿ ಸಂಸ್ಥೆಗಳು ಕೈಜೋಡಿಸಬೇಕು ಆ ಮೂಲಕ ಗ್ರಾಮದ ಜನಸಾಮಾನ್ಯರ ಬೇಡಿಕೆಗಳಿಗೆ ಸರಕಾರೇತರ ಸಂಸ್ಥೆಗಳು ಮುಂಚೂಣಿಗೆ ನಿಲ್ಲುವಂತ್ತಾಗಬೇಕು,ಎಲ್ಲಾವಿಚಾರದಲ್ಲಿ ಸರಕಾರ ಹಾಗೂ ಜನಪ್ರತಿನಿಧಿಗಳ ಕದ ತಟ್ಟುವುದಕ್ಕಿಂತ ಇಂಥಹ ಸಂಸ್ಥೆಗಳ ಸೇವೆಯನ್ನು ಬಳಸಿಕೊಳ್ಳಬೇಕು ಪ್ರಸ್ತುತ ಸರಕಾರಿ ಆಸ್ಪತ್ರೆಗಳು ಉತ್ತಮ ಸೇವೆ ನೀಡುತ್ತಿವೆ.ನಮ್ಮ ಈ ವ್ಯವಸ್ಥೆಯಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತ್ತಾಗಬೇಕು ಎಂದು ಹೇಳಿದರು. ಪಾಂಡೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಸುಶೀಲ ಪೂಜಾರಿ,ಉಪಾಧ್ಯಕ್ಷ ವೈ .ಬಿ ರಾಘವೇಂದ್ರ, ಸದಸ್ಯರಾದ ಸುಜಾತ ವೆಂಕಟೇಶ ಪೂಜಾರಿ, ಸಂಧ್ಯಾ ರಾವ್,ಐರೋಡಿ ಗ್ರಾಮಪಂಚಾಯತ್ ಸದಸ್ಯ ನವೀನ್ ಕಾರಂತ್,ಸುಬ್ರಹ್ಮಣ್ಯ ಆಚಾರ್,ಗುತ್ತಿಗೆದಾರ ನಾಗರಾಜ್ ಪೈ,ಮಾಜಿ .ತಾ.ಪಂ ಅಧ್ಯಕ್ಷೆ ಜ್ಯೋತಿ ಉದಯ್ ಪೂಜಾರಿ,ಸಾಸ್ತಾನ ಸಿ ಎ ಬ್ಯಾಂಕ್ ನಿರ್ದೇಶಕ ರಮೇಶ್ ಕಾರಂತ್,ಆರೋಗ್ಯ ರಕ್ಷಾ ಸಮಿತಿ ಸದಸ್ಯ ಐರೋಡಿ ವಿಠ್ಠಲ್ ಪೂಜಾರಿ,ದಾನಿಗಳಾದ ನಾಗರಾಜ್ ಕಾರಂತ್,ಆರೋಗ್ಯ ಇಲಾಖೆಯ ರಾಮ ರಾವ್,ಲತಾ ನಾಯಕ್,ಉಡುಪಿ ಟಿ.ಎಚ್.ಓ ಡಾ.ವಾಸುದೇವ್,ಸ್ಥಳೀಯರಾದ ಸುರೇಶ್ ಕುಂದರ್,ಸುರೇಶ್ ಪೂಜಾರಿ ಪಾಂಡೇಶ್ವರ, ಶಂಕರ್ ಕುಲಾಲ್ ಉಪಸ್ಥಿತರಿದ್ದರು. ಅಮೆರಿಕೇರ್ಸ್ ಇಂಡಿಯಾ ಫೌಂಡೇಶನ್ ಸಂಸ್ಥೆಯ ಸಮನ್ವಯ ವಿಭಾಗದ ನವೀನ್ ಪ್ರಸ್ತಾವನೆ ಸಲ್ಲಿಸಿದರು.ಮುಖ್ಯ ವೈದ್ಯಾಧಿಕಾರಿ ಡಾ.ರಾಘವೇಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.ಪಾರ್ಮ ಸಿಸ್ಟರ್ ಶೀಲಾ ಮ್ಯಾಥ್ಯೂ ವಂದಿಸಿದರು