ಕುಂದಾಪುರ :ಕರ್ನಾಟಕ ರಾಜ್ಯದ 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾದ ಡಾ. ಸಿ. ನಾರಾಯಣ ಸ್ವಾಮಿ ನಿನ್ನೆ ಶುಕ್ರವಾರ ಕುಂದಾಪುರ ಪುರಸಭೆಗೆ ಭೇಟಿ ನೀಡಿದರು
ಅವರು ಕುಂದಾಪುರ ಪುರಸಭೆಯ ಅಭಿವೃದಿಗಾಗಿ ಸರಕಾರದಿಂದ ಮಂಜೂರಾದ ಹಣದ ಆಯವ್ಯಯಗಳ ಬಗ್ಗೆ ಅವರು ಮಾಹಿತಿ ಪಡೆದುಕೊಂಡು ಪುರಸಭೆಯ ಮುಂದಿನ ಯೋಜನೆಗಳ ಬಗ್ಗೆ ಅಧಿಕಾರಿ ವರ್ಗ ಹಾಗೂ ಪುರಸಭಾ ಸದಸ್ಯರೊಂದಿಗೆ ಸುಧೀರ್ಘ ಚರ್ಚೆ ನೆಡೆಸಿದರು
ಈ ಸಂದರ್ಭದಲ್ಲಿ ರಾಜ್ಯ ಹಣಕಾಸು ಆಯೋಗದ ಮೊಹಮ್ಮದ್ ಸನಾವುಲ್ಲಾ ಹಣಕಾಸು ಆಯೋಗದ ಸದಸ್ಯ ಆರ್.ಎಸ್. ಪೋಂಡೆ ಆಯೋಗದ ಕಾರ್ಯದರ್ಶಿ ಉಜ್ವಲ್ ಕುಮಾರ್ ಘೋಷ್ ಆಯೋಗದ ಸಮಾಲೋಚಕ ಎಂ.ಕೆ. ಕೆಂಪೇಗೌಡ ಹಾಗೂ ಸಿ.ಜಿ.ಸುಪ್ರಸನ್ನ ಉಪಸ್ಥಿತರಿದ್ದರು ಸಭೆಯಲ್ಲಿ ಪುರಸಭಾ ಅಧ್ಯಕ್ಷರಾದ ಮೋಹನ್ ಶೆಣೈ ಉಪಾಧ್ಯಕ್ಷೆ ವನಿತಾ ಎಸ್ ಬಿಲ್ಲವ ಹಾಗೂ ಪುರಸಭಾ ಸದಸ್ಯರು ಉಪಸ್ಥಿತರಿದ್ದರು