Home » ಶಿಕ್ಷಣ ಮಾಹಿತಿ ಕಾರ್ಯಾಗಾರ ಉದ್ಘಾಟನೆ
 

ಶಿಕ್ಷಣ ಮಾಹಿತಿ ಕಾರ್ಯಾಗಾರ ಉದ್ಘಾಟನೆ

by Kundapur Xpress
Spread the love

ಕುಂದಾಪುರ : ನಗರದ ಚಿಕ್ಕನ್ಸಾಲ್ ರಸ್ತೆಯಲ್ಲಿರುವ ಮೊಗವೀರ ಭವನದಲ್ಲಿ ಪಿಯುಸಿಯ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಪಿಯುಸಿ ಕ್ರಾಸ್ ರೋಡ್ ಕಾರ್ಯಾಗಾರವನ್ನು ಮಂಗಳೂರಿನ ಖ್ಯಾತ ಶಿಕ್ಷಣ ತಜ್ಞರಾದ ಡಾ.ನಾರಾಯಣ್ ಕಾಯರ್ಕಟ್ಟೆಯವರು ಉದ್ಘಾಟಿಸಿ ಮಾತನಾಡಿದರು  

ಪಿಯುಸಿಯ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳು ಸ್ಪಷ್ಟ ಯೋಜನೆಗಳೊಂದಿಗೆ ತಮ್ಮ ಶೈಕ್ಷಣಿಕ ಪ್ರಗತಿಗೆ ಪೂರಕವಾಗುವಂತಹ ಅನೇಕ ಶಿಕ್ಷಣಗಳ ಮಾಹಿತಿಯನ್ನು ಪಡೆದು ಸದ್ಬಳಕೆ ಮಾಡಿಕೊಂಡು ಶ್ರದ್ದೆ ಹಾಗೂ ಪ್ರಾಮಾಣಿಕತೆಯಿಂದ ಯಶಸ್ಸನ್ನು ಸಾಧಿಸಿ ಈ ದೇಶದ ಆಸ್ತಿಯಾಗಬೇಕೆಂದು ಕರೆ ನೀಡಿದರು

ಮುಖ್ಯ ಅತಿಥಿಗಳಾಗಿ ತ್ರಿಶಾ ಸಮೂಹ ಶಿಕ್ಷಣ ಸಂಸ್ಥೆಯ ಕಂಪ್ಯೂಟರ್ ಸೈನ್ಸ್ ಮತ್ತು ಐಟಿ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ನಾರಾಯಣ್ ರಾವ್ ಉಡುಪಿಯ ಚಾರ್ಟೆಡ್ ಅಕೌಂಟೆಂಟ್ ಸಿ ಏ ವಿನೀತ್‌ ಶೆಟ್ಟಿ ಹಾಗೂ ಸಹ್ಯಾದ್ರಿ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಎಂ ಮಂಜುನಾಥ್ ಕಾಮತ್ ಆಗಮಿಸಿದ್ದರು.ಕಾರ್ಯಾಗಾರವನ್ನು ಆಯೋಜಿಸಿದ ಕುಂದಾಪುರ ಎಕ್ಸ್‌ ಪ್ರೆಸ್‌ ಇದರ ಮುಖ್ಯಸ್ಥರಾದ ಗಣೇಶ್ ಹೆಗ್ಡೆಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು

ಕಾರ್ಯಗಾರದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಂಪನ್ಮೂಲ ಶಿಕ್ಷಣ ತಜ್ಞರು ವಿದ್ಯಾರ್ಥಿಗಳಲ್ಲಿದ್ದ ಗೊಂದಲ ಹಾಗೂ ಸಮಸ್ಯೆಗಳನ್ನು ನಿವಾರಿಸಿ ಸಿ ಏ, ಸಿ ಎಸ್‌, ಬಿ ಸಿ ಏ,ಎಂ ಸಿ ಎ,ಹಾಗೂ ಇನ್ನಿತರ ಶಿಕ್ಷಣದ ಮೂಲಕ ಉದ್ಯೋಗವಕಾಶಗಳ ಬಗ್ಗೆ ಮಾಹಿತಿ ನೀಡಿದರು ಕುಂದಾಪುರದ ವಿವಿಧ ಕಾಲೇಜುಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಗಾರದ ಪ್ರಯೋಜನವನ್ನು ಪಡೆದರು ಎಲ್ಲಾ ವಿದ್ಯಾರ್ಥಿಗಳಿಗೆ ಕಾಮರ್ಸ್ ವಿಭಾಗದಲ್ಲಿರುವ ವಿವಿಧ ಶಿಕ್ಷಣದ ಮಾಹಿತಿಯ ಕೈಪಿಡಿಗಳನ್ನು ವಿತರಿಸಲಾಯಿತು

          ಫ್ರೋ.ಚಂದನ್ ಕುಮಾರ್ ಸಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಜ್ಞ ಹಾಗೂ ಸ್ವಾತಿ ಪ್ರಾರ್ಥಿಸಿ ಫ್ರೋ.ಚಂದನ್ ಕುಮಾರ್ ಸಿ ಧನ್ಯವಾದವಿತ್ತರು

   

Related Articles

error: Content is protected !!