ಕುಂದಾಪುರ : ಬಿಜೆಪಿ ಕುಂದಾಪುರ ಮಂಡಲ ಇವರ ನೇತೃತ್ವದಲ್ಲಿ ಕುಂದಾಪುರ ಪುರಸಭೆಯ ಪೌರಕಾರ್ಮಿಕರೊಂದಿಗೆ ರಕ್ಷಾ ಬಂಧನ ಕಾರ್ಯಕ್ರಮ ಭಾರತೀಯ ಜನತಾ ಪಾರ್ಟಿ ಕುಂದಾಪುರ ನೇತೃತ್ವದಲ್ಲಿ ಅಂಬೇಡ್ಕರ್ ಸಭಾಭವನದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಭಾರತ ಜಗತ್ತಿಗೆ ನೀಡಿದ ವಸುದೈವ ಕುಟುಂಬಕಂ ಎಂಬ ಸುಂದರ ಪರಿಕಲ್ಪನೆಯನ್ನು ಸಹಕರಿಸುವ ನಿಟ್ಟಿನಲ್ಲಿ ಮೇಲು-ಕೀಳು ಭಾವ ತೊಲಗಿಸಿ ಎಲ್ಲರ ಮನಸ್ಸನ್ನು ಒಂದುಗೂಡಿಸಿ, ಸಾಮರಸ್ಯದ ಮೂಲಕ ರಾಷ್ಟ್ರ ಭಾವಯುಕ್ತ ಸಮಾಜ ನಿರ್ಮಾಣ ಆಗಬೇಕು. ನಾವೆಲ್ಲ ಒಂದು ಎಂಬ ಸೋದರ ಭಾವದ ಪ್ರತೀಕವಾಗಿರುವ ರಕ್ಷೆಯನ್ನು ಧರಿಸೋಣ ಎಂದು ಪ್ರಾಸ್ತಾವಿಕ ನುಡಿಗಳನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿಯವರು ರಕ್ಷಾಬಂಧನದ ಶುಭವನ್ನು ಹಾರೈಸಿ, ತದನಂತರ ಅವರ ಜೊತೆಗೂಡಿ ಉಪಹಾರವನ್ನು ಸ್ವೀಕರಿಸಿದರು