Home » ಸಿಎಂ ಭೇಟಿಯಾದ – ಶಾಸಕ ಕಿರಣ್ ಕೊಡ್ಗಿ.
 

ಸಿಎಂ ಭೇಟಿಯಾದ – ಶಾಸಕ ಕಿರಣ್ ಕೊಡ್ಗಿ.

ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ

by Kundapur Xpress
Spread the love

ಬೆಳಗಾವಿ : ಮೊದಲ ಬಾರಿಗೆ ನೂತನವಾಗಿ ಶಾಸಕರಾಗಿ ಆಯ್ಕೆಯಾಗಿ ಒಂದು ವರ್ಷ ಏಳು ತಿಂಗಳು ಪೂರ್ಣಗೊಳಿಸಿ, 5ನೇ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿದ್ದು. ಕ್ಷೇತ್ರದ ಜನರಿಗೆ ನೂತನವಾಗಿ ಆಯ್ಕೆಯಾದ ನಮ್ಮೆಲ್ಲರ ಶಾಸಕರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಹಾಗೂ ನಿರ್ವಹಣೆಯ ಕೆಲಸಗಳಿಗೆ ಜನರಿಂದ ದಿನಂಪ್ರತಿ ಮನವಿಗಳನ್ನು ಸ್ವೀಕರಿಸುತ್ತಿದ್ದು. ಜನರ ಸಮಸ್ಯೆಗಳನ್ನು ನಿವಾರಿಸಲು ಮತ್ತು ಕ್ಷೇತ್ರದಲ್ಲಿ ಹೊಸ ಅಗತ್ಯ ಯೋಜನೆಗಳನ್ನು ಪ್ರಾರಂಭಿಸಲು ಜನರು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ

ನಾವು ಶಾಸಕರಾದ ಆಗಿನಿಂದಲೂ ಯಾವುದೇ ಗಮನಾರ್ಹ ಅನುದಾನ ಲಭಿಸದೆ ಜನರ ಆದ್ಯತೆಯ ಬೇಡಿಕೆಗಳಿಗೆ, ತುರ್ತು ಸಮಸ್ಯೆಗಳಿಗೆ, ಮೂಲಭೂತ ಸೌಕರ್ಯಗಳ ನಿರ್ವಹಣೆಗೆ ಹಾಗೂ ಅಭಿವೃದ್ಧಿಯ ಕಾಮಗಾರಿಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಪ್ರಗತಿಯಲ್ಲಿರುವ ಅನೇಕ ಕಾಮಗಾರಿಗಳು ನಿಧಾನಗತಿಯಲ್ಲಿದ್ದು ಮತ್ತು ಕೆಲವು ಸ್ಥಗಿತಗೊಂಡಿದೆ.

ಆದುದರಿಂದ ಪ್ರಥಮ ಬಾರಿ ಶಾಸಕರಾಗಿ ಆಯ್ಕೆಯಾದ ನಮ್ಮ ಕ್ಷೇತ್ರಕ್ಕೆ ಮಳೆಹಾನಿ, ಕೃಷಿಹಾನಿ, ಸಮುದ್ರ ಕೊರತೆ ಆಸ್ಪತ್ರೆ ಶಾಣ ಕಟ್ಟಡ ರಸ್ತೆಗಳ ದುರಸ್ತಿ ನಿರ್ಮಾಣ ಕಾಲು ಸಂಕ, ಮತ್ತು ಮೋರಿಗಳ ದುರಸ್ತಿ, ನಿರ್ಮಾಣ, ನದಿ ದಂಡೆ ಸುರಕ್ಷತೆ ಹಾಗೂ ವಿದ್ಯುತ್ ದಾರಿದೀಪಗಳ ಸೌಕರ್ಯ ಇತ್ಯಾದಿ ಸಮಸ್ಯೆಗಳಿಗೆ ಸ್ಪಂದಿಸಲು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿಯವರು ವಿನಂತಿಸಿಕೊಂಡು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರಿಗೆ ಮನವಿ ಪತ್ರವನ್ನು ನೀಡಿದರು.

ಈ ಸಂದರ್ಭದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟೆ ಹೊಳೆ, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ ಪಲ್ ಸುವರ್ಣ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಹಾಗೂ ರಾಜ್ಯದ ವಿವಿಧ ಶಾಸಕರು ಉಪಸಿತರಿದ್ದರು.

 

Related Articles

error: Content is protected !!