226
ಕುಂದಾಪುರ : ನಗರದ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ನಡೆದ ಲಕ್ಷ ದೀಪೋತ್ಸವದ ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದು ಪುನೀತರಾದರು ಮುಂಜಾನೆ 5.00 ಗಂಟೆಯಿಂದಲೇ ದೇವಾಲಯಕ್ಕೆ ಆಗಮಿಸಿದ ಭಕ್ತರು ವಿವಿಧ ಧಾರ್ಮಿಕ ಕಾರ್ಯಕ್ರಮಗಳಾದ ಬ್ರಹ್ಮ ಕಲಶ ಸ್ಥಾಪನೆ ಕಲಾಭಿವೃದ್ಧಿ ಹೋಮ ಶತರುದ್ರಾಭಿಷೇಕದಲ್ಲಿ ಪಾಲ್ಗೊಂಡು ಮಹಾ ಅನ್ನ ಸಂತರ್ಪಣೆಯ ಅನ್ನ ಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾದರು

ಲಕ್ಷ ದೀಪೋತ್ಸವದ ಅಂಗವಾಗಿ ನಡೆದ ಪುಷ್ಪ ರಥೋತ್ಸವದ ಪುರಮೆರವಣಿಗೆಯು ಅತ್ಯಂತ ವೈಭವೋಪೇತವಾಗಿ ನಡೆಯಿತು ಪುರಮೆರವಣಿಗೆಯಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಎಸ್ ಕೃಷ್ಣಾನಂದ ಚಾತ್ರ ಹಾಗೂ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸತೀಶ ಶೆಟ್ಟಿ, ವಿಶ್ವನಾಥ ಪೂಜಾರಿ, ನಾಗರಾಜ ರಾಯಪ್ಪನಮಠ, ಜಯಾನಂದ ಖಾರ್ವಿ, ಸತೀಶ್, ವೀಣಾ ಹೆಚ್, ಸವಿತಾ ಜಗದೀಶ ಹಾಗೂ ಊರ ಪ್ರಮುಖರು ಭಾಗವಹಿಸಿದ್ದರು ಪುರಮೆರವಣಿಗೆಯಲ್ಲಿ ಸಾಂಪ್ರದಾಯಕ ವಾದ್ಯದೊಂದಿಗೆ ಡೊಳ್ಳುಕುಣಿತ ಹಾಗೂ ಚಂಡೆವಾದನ ಗಮನ ಸೆಳೆಯಿತು

