ಮಂಗಳೂರು : ಲವ್ ಜಿಹಾದ್ ನಿಂದ ತೊಂದರೆಗೆ ಸಿಲುಕಿದ ಒಂದು ಯುವತಿಯರ ರಕ್ಷಣೆಗಾಗಿ ಶ್ರೀರಾಮ ಸೇನೆಯಿಂದ 9090443444″ ದೂರವಾಣಿ ಸಂಖ್ಯೆಯ ಸಹಾಯವಾಣಿ ಆರಂಭಿಸಲಾಗಿದೆ. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಬಾಗಲಕೋಟೆ, ಕಲ್ಬುರ್ಗಿ, ದಾವಣಗೆರೆಯನ್ನು ಕೇಂದ್ರವಾಗಿರಿಸಿ ಈ ಸಹಾಯವಾಣಿ ದಿನದ 24 ಗಂಟೆ ಕಾರ್ಯನಿರ್ವಹಿಸಲಿದೆ. ರಾಜ್ಯದ ಯಾವುದೇ ಮೂಲೆಯಿಂದ ಈ ಸಹಾಯವಾಣಿಗೆ ಕರೆ ಮಾಡಬಹುದು, ಕರೆ ಮಾಡಿದವರ ಮಾಹಿತಿ ಗೌಪ್ಯ ವಾಗಿಡುತ್ತೇವೆ. ಲವ್ -ಜಿಹಾದ್ ಕರೆಗಳನ್ನು ಮಾತ್ರ ಸ್ವೀಕಾರ ಮಾಡಲಾಗುತ್ತದೆ. ತಂಡದಲ್ಲಿ ಹಿರಿಯ ಸಲಹೆಗಾರರು, ಮಾಜಿ ಪೊಲೀಸ್ ಅಧಿಕಾರಿಗಳು, ಕಾನೂನು ಸಲಹೆಗಾರರು ಇರಲಿದ್ದಾರೆ. ಕಾನೂನು ಮೀರಿ ನಾವು ಯಾವುದೇ ಕೆಲಸ ಮಾಡುವುದಿಲ್ಲ ಅನೈತಿಕ ಪೊಲೀಸ್ಗಿರಿಗೆ ಅವಕಾಶ ನೀಡುವುದಿಲ್ಲ ಎಂದು ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಲವ್ ಜಿಹಾದ್ ಹೆಸರಿನಲ್ಲಿ ಉತ್ತರಭಾರತದಲ್ಲಿ2022-23ನೇ ಸಾಲಿನಲ್ಲಿ 153 ಹಿಂದು ಯುವತಿಯರ ಬರ್ಬರ ಕೊಲೆಗಳು ನಡೆದಿವೆ. ಉತ್ತರ ಪ್ರದೇಶದಲ್ಲಿ 69, ಮಧ್ಯ ಪ್ರದೇಶದಲ್ಲಿ 22, ಗುಜರಾತ್-12, ಉತ್ತರಖಂಡ-11 ಮತ್ತು ಮಹಾರಾಷ್ಟ್ರದಲ್ಲಿ-9. ದೇಶದಲ್ಲಿ ಪ್ರತಿನಿತ್ಯ 172 ಯುವತಿಯರು ನಾಪತ್ತೆಯಾಗುತ್ತಿದ್ದಾರೆ. 172 ಯುವತಿಯರನ್ನು ಅಪಹರಣ, 5 ಯುವತಿಯರನ್ನು ವೇಶ್ಯಾವಾಟಿಕೆ ಬಳಸಲಾಗುತ್ತಿದೆ ಎಂದು ವಿವರಿಸಿದರು. ಇದೇ ವೇಳೆ ಸಹಾಯವಾಣಿ ಭಿತ್ತಿಚಿತ್ರ ಬಿಡುಗಡೆಗೊಳಿಸಲಾಯಿತು. ಶ್ರೀರಾಮಸೇನೆ ಮಂಗಳೂರು, ಉಡುಪಿ ವಿಭಾಗ ಅಧ್ಯಕ್ಷ ಮಧುಸೂದನ್ ಉರ್ವಸ್ಟೋರ್, ಉಡುಪಿ ಜಿಲ್ಲಾಧ್ಯಕ್ಷ ಜಯರಾಮ್ ಅಂಬೆಕಲ್ಲು ಹಾಸನ ಜಿಲ್ಲಾಧ್ಯಕ್ಷ ಹೇಮಂತ ಜಾನಕೆರೆ, ಮಂಗಳೂರು ಕಾರ್ಯಾಧ್ಯಕ್ಷ ಅರುಣ್ ಕದ್ರಿ, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಪೂಜಾರಿ ಉಪಸ್ಥಿತರಿದ್ದರು