Home » ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ತರಭೇತಿ ಕಾರ್ಯಗಾರ
 

ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ತರಭೇತಿ ಕಾರ್ಯಗಾರ

by Kundapur Xpress
Spread the love

ಮೂಡ್ಲಕಟ್ಟೆ  : ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಗ್ರಂಥಾಲಯ ವಿಭಾಗದಿಂದ ಈಬಿಸ್ ಸಿ ಒ ಇಂಜಿನಿಯರಿಂಗ್ ಸೂಟ್ ಎ ಎಂ ಎ ಮೈಕ್ರೋ ಕೋರ್ಸುಗಳು ಮತ್ತು ಐ ಇ ಇ ಇ ಮೇಲೆ ಕೇಂದ್ರೀಕರಿಸಿ ವಿ ಟಿ ಯು ಕನ್ಸೋರ್ಟಿಯಮ್ ತರಭೇತಿ ಕಾರ್ಯಗಾರ ನಡೆಯಿತು

.6ನೇ ಸೆಮೆಸ್ಟರ್ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಗೆ ಸಂಶೋಧನಾ ಕೌಶಲ್ಯ ಮತ್ತು ವೃತ್ತಿಪರ ಅಭಿವೃದ್ಧಿಯನ್ನು ವೃದ್ಧಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿ ಸಲಾಯಿತು. ಈಬಿಸ್ ಸಿಒ – ಐ ಇ ಇ ಇ ದಕ್ಷಿಣ ಭಾರತದ ತರಭೇತಿ ವ್ಯವಸ್ಥಾಪಕ ಎಂ.ಎಸ್ ಶ್ರೀನಿವಾಸ ನೇತೃತ್ವ ವಹಿಸಿದ್ದರು.ತರಭೇತಿ ಕಾರ್ಯಾಗಾರದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಅಬ್ದುಲ್ ಕರೀಮ್ ರವರು ವಹಿಸಿ, ಕಾರ್ಯಗಾರವನ್ನು ಉದ್ಘಾಟಿಸಿದರು

.ಐ ಇ ಇ ಇ ನ ಸದಸ್ಯರಾಗಿರುವ ಅವರು ವಿ. ಟಿ. ಯು ಕನ್ಸೋರ್ಟಿಯಂ ವತಿಯಿಂದ ಲಭ್ಯವಿರುವ ಎಲ್ಲ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಮಾರ್ಗದರ್ಶನ ನೀಡಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಮೆಲ್ವಿನ್ ಡಿಸೋಜಾ ಹಾಗೂ ಗ್ರಂಥಾಪಾಲರಾದ ಶ್ಯಾಮ್ ನಾಯ್ಕ ಉಪಸ್ಥಿತರಿದ್ದರು.ಪ್ರಾಧ್ಯಾಪಕಿ ಶ್ರೀನಿಧಿ ರಾವ್ ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

Related Articles

error: Content is protected !!