Home » ಕೋಟೇಶ್ವರ ಮೇಪು ಕೊರಗರ ಕಾಲೋನಿಗೆ ಸಂಸದ ಕೋಟ ಭೇಟಿ
 

ಕೋಟೇಶ್ವರ ಮೇಪು ಕೊರಗರ ಕಾಲೋನಿಗೆ ಸಂಸದ ಕೋಟ ಭೇಟಿ

by Kundapur Xpress
Spread the love

ಕೋಟೇಶ್ವರ : ಉಡುಪಿ ಜಿಲ್ಲೆಯ, ಕುಂದಾಪುರ ತಾಲೂಕು, ಕೋಟೇಶ್ವರ ಗ್ರಾಮ ಪಂಚಾಯತ್ ಮೇಪು ಕೊರಗರ ಕಾಲೋನಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಕಾಲೋನಿಯ ಮೂಲಭೂತ ಸೌಕರ್ಯದ ಬಗ್ಗೆ ವಿಚಾರಿಸಿದರು. ಮೇಪುವಿನ 9 ಕೊರಗ ಕುಟುಂಬಗಳ ಸದಸ್ಯರು ವಾಸ್ತವ್ಯದ ಮನೆ, ಕುಡಿಯುವ ನೀರು, ನಿವೇಶನಗಳ ಬಗ್ಗೆ ಸಂಸದರಿಗೆ ಮಾಹಿತಿ ನೀಡಿ, ಒಂದೇ ಕುಟುಂಬದಿಂದ ವಿಭಜನೆಗೊಂಡವರಿಗೆ ಹೆಚ್ಚುವರಿ ಭೂಮಿಯ ಅಗತ್ಯವಿದ್ದು, ಕುಡಿಯುವ ನೀರಿಗಾಗಿ ಕಾಲೋನಿಗೆ ವಿಶೇಷ ಕುಡಿಯುವ ನೀರಿನ ಘಟಕ ಒದಗಿಸುವಂತೆ ಕೋರಿಕೆ ಸಲ್ಲಿಸಿದರು.

ಸಂಸದರೊಂದಿಗೆ ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರಾಗಿಣಿ ದೇವಾಡಿಗ, ಉಪಾಧ್ಯಕ್ಷೆ ಶ್ರೀಮತಿ ಆಶಾ ವಿ. ಸದಸ್ಯರಾದ ರಾಜಶೇಖರ ಶೆಟ್ಟಿ ,ಲೋಕೇಶ್ ಅಂಕದಕಟ್ಟೆ, ಶ್ರೀಮತಿ ನೇತ್ರಾವತಿ, ಶ್ರೀಮತಿ ಪುಟ್ಟಿ, ಶ್ರೀಮತಿ ಸುಶೀಲ ಪೂಜಾರ್ತಿ, ನಾಗರಾಜ ಕಾಂಚನ್, ವಿವೇಕ , ಗುತ್ತಿಗೆದಾರರಾದ ರಾಜೇಶ್ ಉಡುಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ನಾಯ್ಕ, ಪರಿಶಿಷ್ಟ ಪಂಗಡದ ಅಧಿಕಾರಿ ವಿಶ್ವನಾಥ್ ಶೆಟ್ಟಿ, ಕೊರಗ ಸಮುದಾಯದ ಮುಖಂಡರಾದ ಗಣೇಶ್ ಕೊರಗ ಕೃಷ್ಣಮೇಪು ಮುಂತಾದವರಿದ್ದರು.

 

Related Articles

error: Content is protected !!