ಕುಂದಾಪುರ: ಕಳೆದ ಏಳು ದಶಕಗಳ ಹಿಂದೆ ಗ್ರಾಮೀಣದಲ್ಲಿ ಪ್ರದೇಶದಲ್ಲಿ ಸ್ಥಾಪಿತವಾದ ಮಾನಂಜೆ ವ್ಯವಸಾಯ ಸಹಕಾರಿ ಸಂಘವು ಅಭಿವೃಧ್ದಿಯ ಪಥದಲ್ಲಿ ಬೆಳೆದಿದ್ದು ಅವಿಭಜಿತ ದ.ಕ. ಜಿಲ್ಲೆಯಲ್ಲೇ ಅತ್ಯುತ್ತಮ ಸಂಘವೆಂದು ಗುರುತಿಸಿಕೊಂಡಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ ಹೇಳಿದರು.
ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಸಿದ್ದಾಪುರ ಶಾಖೆಯ ಶ್ರೀ ಬ್ರಾಹ್ಮೀ ಸ್ವಂತ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಕಮಲಶಿಲೆ ದೇವಳದ ಆಡಳಿತ ಧರ್ಮದರ್ಶಿ ಸಚ್ಚಿದಾನಂದ ಚಾತ್ರ ಮಾತನಾಡಿ, ಮಾನಂಜೆ ಸಹಕಾರಿ ಸಂಸ್ಥೆ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗೆ ಕಾಲ ಕಾಲಕ್ಕೆ ಸಾಲ ಸೌಲಭ್ಯ ಗಳನ್ನು ನೀಡುವ ಮೂಲಕ ಜನತೆಗೆ ಆಧಾರವಾಗಿದ್ದು, ಸಂಸ್ಥೆ ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನಂಜೆ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಎಸ್. ಶಂಕರನಾರಾಯಣ ಯಡಿಯಾಳ ಸಿದ್ದಾಪುರ ಶಾಖೆ É ಸ್ವಂತ ಕಟ್ಟಡ ನಿರ್ಮಿಸುವ ಬಗ್ಗೆ ಹಲವು ವರುಷಗಳ ಚಿಂತನೆಯಾಗಿದ್ದು ಅದು ಈಡೇರಿದೆ. ನಮ್ಮ ಸಂಸ್ಥೆಯಿಂದ ರೈತರಿಗೆ ಇನ್ನು ಹೆಚ್ಚಿನ ಸೌಲಭ್ಯಗಳನ್ನು ನೀಡುವ ಯೋಜನೆಯಿದ್ದು ತಮ್ಮೆಲ್ಲ ಸಹಕಾರದಿಂದ ಸಂಸ್ಥೆ ಹಂತ ಹಂತವಾಗಿ ಬೆಳೆದು ಬಂದಿದ್ದು ಮುಂದಿನ ದಿನಗಳಲ್ಲಿ ಸಂಸ್ಥೆಯ ಮತ್ತಷ್ಟು ಏಳಿಗೆಗೆ ಎಲ್ಲರ ಸಹಕಾರ ಕೋರಿದರು
ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ ಕಾನ್ಮಕ್ಕಿ, ತಾಲೂಕು ಸಹಕಾರ ಸಂಘಗಳ ನಿಬಂಧಕರಾದ ಅರುಣ್ ಕುಮಾರ್ ಎಸ್.ವಿ. ಮಾನಂಜೆ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ. ಮಂಜುನಾಥ ನಾಯ್ಕ್, ಉಪಾಧ್ಯಕ್ ರಘುರಾಮ ಶೆಟ್ಟಿ ನಿರ್ದೇಶಕರಾದ ಎಂ.ಎಸ್. ವಿಷ್ಣುಮೂರ್ತಿ, ರವಿ ಗಾಣಿಗ, ಎಚ್ ರಾಜೀವ ಪೂಜಾರಿ, ರತ್ನಾಕರ್ ಶೆಟ್ಟಿ, ಜಯರಾಮ ನಾಯ್ಕ್, ನಾಗಪ್ಪ ಪೂಜಾರಿ, ಇ. ಸುಬ್ರಾಯ ಹೆಗ್ಡೆ, ಅಂಬಿಕಾ ಮಯ್ಯ, ಜ್ಯೋತಿ, ಎಸ್ ರಾಜು, ಯು ಕರುಣಾಕರ್ ನಾಯ್ಕ್, ಯು ಪ್ರಭಾಕರ್ ನಾಯ್ಕ್ ಸಂಘದ ಹಿರಿಯ ಸದಸ್ಯ ವಾಸುದೇವ ಯಡಿಯಾಳ , ಶಾಖಾ ವ್ಯವಸ್ಥಾಪಕ ಸತ್ಯನಾರಾಯಣ ಕನ್ನಂತ್, ರಾಘವೇಂದ್ರ ರಾವ್ ಮಾನಂಜೆ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಉದಯ್ ಶೆಟ್ಟಿ, ಅಂಪಾರು, ಅಮಾಸೆಬೈಲ್, ಉಳ್ಳೂರು, ಮಚ್ಚಟ್ಟು ವಿ ಎಸ್ ಎಸ್ ಅಧ್ಯಕ್ಷ ಅಶೋಕ್ ಅಂಪಾರು, ರತ್ನಾಕರ್ ಶೆಟ್ಟಿ ಮಂಜಯ್ಯ ಶೆಟ್ಟಿ ಹಾಗೂ ನಾನಾ ಭಾಗಗಳ ಸಹಕಾರಿ ಸಂಘಗಳ ಅಧ್ಯಕರು ಉಪಸ್ಥಿತರಿದ್ದರು.