75
ಕೋಟ : ಗಾಣಿಗ ಯುವ ಸಂಘಟನೆ ಕೋಟ , ಗಾಣಿಗ ಮಹಿಳಾ ಸಂಘಟನೆ ಕೋಟ ಆಶ್ರಯದಲ್ಲಿ, ಹಾರಾಡಿ ಮಹಾಬಲ ಗಾಣಿಗ ಕುಟುಂಬ ಸದಸ್ಯರಿಂದ ಕೊಡಮಾಡುವ 2025ನೇ ಸಾಲಿನ ಹಾರಾಡಿ ಮಹಾಬಲ ಗಾಣಿಗ ಸಂಸ್ಮರಣಾ ಪ್ರಶಸ್ತಿಗೆ ಹಿರಿಯ ಸ್ತೀ ವೇಷಧಾರಿ ಮಂದಾರ್ತಿ ಅಣ್ಣು ನಾಯ್ಕ್ (ಎಂ.ಎ. ನಾಯ್ಕ್ ) ಆಯ್ಕೆಯಾಗಿದ್ದಾರೆ.
ಗಾಣಿಗ ಯುವ ಸಂಘಟನೆ ಕೋಟ ಆಶ್ರಯದಲ್ಲಿ ಮೇ 18ರಂದು ರವಿವಾರ ಸಾಸ್ತಾನ ಟೋಲ್‌ಗೇಟ್ ಸಮೀಪವಿರುವ ಸಂಭ್ರಮ ಸಭಾಂಗಣದಲ್ಲಿ ಅಪರಾಹ್ನ 2.00 ಗಂಟೆಯಿAದ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಈ ಸಂದರ್ಭ ಗಾಣಿಗ ಸಮಾಜ ಬಾಂಧವರಿಗೆ ಉಡುಪಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಸಿನಿಮಾ ನೃತ್ಯ, ಯಕ್ಷಗಾನ ನೃತ್ಯ, ಭಾವಗೀತೆ ಮತ್ತು ಸಿನಿಮಾ ಗೀತೆ, ಜನಪದ ನೃತ್ಯ ಮೊದಲಾದ ಸ್ಪರ್ಧೆಗಳು ನಡೆಯಲಿದೆ ಎಂದು ಸಂಘಟನೆಯ ಅಧ್ಯಕ್ಷ ಗಿರೀಶ್ ಗಾಣಿಗ ಬೆಟ್ಲಕ್ಕಿ ತಿಳಿಸಿದ್ದಾರೆ

