ಕೋಟ : ಇಂದಿನ ಕಾಲ ಮೊದಲಿನಂತ್ತಿಲ್ಲ ಸಾಕಷ್ಟು ಬದಲಾವಣೆಯನ್ನು ಕಂಡಿದ್ದು ಬಹು ಕ್ಷೇತ್ರದಲ್ಲಿ ಮಹಿಳೆ ಗುರುತಿಸಿಕೊಂಡು ಸಾಧನೆಗೈಯುತ್ತಿದ್ದಾಳೆ ಇದೊಂದು ಹೊಸ ಅಧ್ಯಾಯಕ್ಕೆ ಮುನ್ನುಡಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ನುಡಿದರು. ಕೋಟ ಗಾಂಧಿಮೈದಾನದಲ್ಲಿ ಕೋಟದ ಮಹಿಳಾ ಮಂಡಲ ಹಮ್ಮಕೊಂಡ 60 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ರಾಜಕಾರಣದ ಕ್ಷೇತ್ರದಲ್ಲೂ ಮಹಿಳೆ ಸೈ ಎನಿಸಿಕೊಂಡು ಸಮಾನ ಹಕ್ಕಿನತ್ತ ಮುನ್ನುಗ್ಗುತ್ತಿದ್ದಾರೆ ಇದಕ್ಕೆ ಇಂಥಹ ಮಹಿಳಾ ಮಂಡಲಗಳೇ ಕಾರಣವಾಗಿದೆ ಸಂಘಟನೆಗಳು ಕಟ್ಟುವುದು ಸುಲಭ ಆದರೆ ಅದನ್ನು ಮುನ್ನಡೆಸುವುದು ಕಷ್ಟಕರ ಇಂಥಹ ಸನ್ನಿವೇಶದಲ್ಲಿ ಆರವತ್ತು ಸಂವತ್ಸರ ಕ್ರಮಿಸಿಕೊಂಡಿದ್ದು ಇತಿಹಾಸವಾಗಿದೆ ಎಂದು ಕೋಟ ಮಹಿಳಾ ಮಂಡಲ ನಡೆದು ಬಂದ ದಾರಿಯನ್ನು ಶ್ಲಾಘಿಸಿದರು. ಕಾರ್ಯಕ್ರಮವನ್ನು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಉದ್ಘಾಟಿಸಿದರು. ಇದೇ ವೇಳೆ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕöÈತ ಸಾಹಿತಿ ಶಿಕ್ಷಕ ನರೇಂದ್ರ ಕುಮಾರ್ ಕೋಟ ಹಾಗೂ ಪೋಲಿಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಧಾ ಪ್ರಭು ಇವರುಗಳಿಗೆ ಸಾಧನಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಾಸ್ತಾನದ ಪಾಂಡೇಶ್ವರ ಮಹಿಳಾ ಮಂಡಲ,ಹAಗಾರಕಟ್ಟೆ ಬಾಳ್ಕದ್ರು ಮಹಿಳಾ ಮಂಡಲ ಇವರುಗಳಿಗೆ ವಿಶೇಷ ಪುರಸ್ಕಾರ ನೀಡಲಾಯಿತು. ಶಾಸಕ ಕಿರಣ್ ಕುಮಾರ್ ಕೊಡ್ಗಿ,ಸಂಸದರ ಪರವಾಗಿ ಪತ್ನಿ ಶಾಂತಾ ಶ್ರೀನಿವಾಸ ಪೂಜಾರಿ , ಮಹಿಳಾ ಮಂಡಲದ ಮಾಜಿ ಅಧ್ಯಕ್ಷೆ ಯಶೋಧ ಹಂದೆ,ಮಾಜಿಕಾರ್ಯದರ್ಶಿ ಸದಾರಮೆ ಕಾರಂತ್, ಇವರುಗಳಿಗೆ ಗೌರವ ಸಂಮ್ಮಾನ ನೀಡಲಾಯಿತು. ನೃತ್ಯ ನಿಕೇತನ ಕೊಡವೂರ ಇದರ ಮುಖ್ಯಸ್ಥರಾದ ವಿದುಷಿ ಮಾನಸಿ ಸುಧೀರ್ ಸುಧೀರ್ ಕೊಡವೂರು, ಮಾಜಿ ಅಧ್ಯಕ್ಷರಾದ ಸುಶೀಲ ಹೊಳ್ಳ,ಭಾಗ್ಯವಾದಿರಾಜ್,ಸುಶೀಲ ಸೋಮಶೇಖರ್ ಸನ್ಮಾನಿಸಲಾಯಿತು. ಸಂಸ್ಥೆಯ ಪದಾಧಿಕಾರಿಗಳಾದ ಭಾರತಿ ವಿ ಮಯ್ಯ,ಸುಧಾ ಮಣೂರು ಇವರನ್ನು ಗುರುತಿಸಿ ಗೌರವಿಸಲಾಯಿತು. ಸನ್ಮಾನ ಪತ್ರವನ್ನು ಸಂಘದ ಸದಸ್ಯರಾದ ಜ್ಞಾಹ್ನವಿ ಹೇರ್ಳೆ ,ವಸಂತಿ ಹಂದಟ್ಟು ವಾಚಿಸಿದರು. ಸಭೆಯ ಅಧ್ಯಕ್ಷತೆಯನ್ನು ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ಎ ಕುಂದರ್ ವಹಿಸಿ 60ನೇ ವರ್ಷದ ಕೇಕ್ ಕತ್ತರಿಸಿ ಸಂಭ್ರಮಿಸಿಕೊಂಡರು. ಸಭೆಯಲ್ಲಿ ಅಭ್ಯಾಗತರಾಗಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸನ್ಮಾನ ಕಾರ್ಯಕ್ರಮ ನೆರವೆರಿಸಿದರು. ಅಥಿತಿಗಳಾಗಿ ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ, ಮಹಿಳಾ ಮಂಡಲದ ಉಪಾಧ್ಯಕ್ಷೆ ಚಂದ್ರಿಕಾ ಭಟ್ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಮಹಿಳಾ ಮಂಡಲದ ಸದಸ್ಯೆ ಸುಜಾತ ಎಂ. ಬಾಯರಿ ನಿರೂಪಿಸಿದರು.ಮಾಜಿ ಅಧ್ಯಕ್ಷೆ ಸುಶೀಲ ಸೋಮಶೇಖರ್ ಪ್ರಾಸ್ತಾವನೆ ಸಲ್ಲಿಸಿ ಸ್ವಾಗತಿಸಿದರು. ಮಾಜಿ ಅಧ್ಯಕ್ಷೆ ಭಾಗ್ಯ ವಾದಿರಾಜ್ ವಂದಿಸಿದರು.ನAತರ ಕೊಡವೂರಿನ ನೃತ್ಯ ನಿಕೇತನ ತಂಡದಿAದ ನಾರಸಿಂಹ ನೃತ್ಯರೂಪಕ ಪ್ರದರ್ಶನಗೊಂಡಿತು