ಕುಂದಾಪುರ : ನಗರದ ಶ್ರೀರಾಮ ಮಂದಿರದಲ್ಲಿ ರಾಮಕ್ಷತ್ರಿಯ ಮಹಿಳಾ ಮಂಡಳಿಯವರಿಂದ ಶ್ರೀ ಶಾರದ ಪೂಜಾ ಮಹೋತ್ಸವಕ್ಕೆ ಚಾಲನೆ ದೊರಕಿತು ದಿನಾಂಕ 09.10.2024ರಂದು ಬುಧವಾರ ಶಾರದ ದೇವಿಯನ್ನು ಪುರ ಮೆರವಣಿಗೆಯಲ್ಲಿ ತಂದು ಶ್ರೀ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳಿಸಲಾಯಿತು
ವಿವಿಧ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಂಟೆ 9-00ರಿಂದ ಗಣಪತಿ ಪ್ರಾರ್ಥನೆ, ದುರ್ಗಾಹೋಮ,ಸ್ವಸ್ತಿ ಪಂಚಗವ್ಯ,ಪುರಸ್ಸರ ಪುಣ್ಯಾಹ ವಾಚನ ಗಣಯಾಗ ಮಧ್ಯಾಹ್ನ ಗಂಟೆ 12-00ಕ್ಕೆ ನಡೆದ ಸಪ್ತಶತಿ ಪಾರಾಯಣದಲ್ಲಿ ರಾಮಕ್ಷತ್ರಿಯ ಮಹಿಳಾ ಮಂಡಳಿಯ ಅಧ್ಯಕ್ಷೆಯಾದ ಸರೋಜಾ ಅರುಣ್ ಕುಮಾರ್ ಹಾಗೂ ಅರುಣ್ ಕುಮಾರ್ ಎಸ್ ವಿ ದಂಪತಿಗಳು ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು
ಪ್ರತಿಷ್ಠಾಪನೆಯ ವಿಧಿ ವಿಧಾನಗಳು ಅರ್ಚಕ ನಾರಾಯಣ ಹೊಳ್ಳ ನೇತೃತ್ವದಲ್ಲಿ ಜರುಗಿತು ಮಧ್ಯಾಹ್ಣ 12.30ಕ್ಕೆ ಜರುಗಿದ ಅನ್ನ ಸಂತರ್ಪಣೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು
ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6.00ರಿಂದ ಜಿಲ್ಲಾಮಟ್ಟದ ಜನಪದ ಸಾಂಸ್ಕೃತಿಕ ವೈಭವ ಸ್ಪರ್ಧೆ ಜರುಗಿತು ಈ ಸಂದರ್ಭದಲ್ಲಿ ರಾಮಕ್ಷತ್ರಿಯ ಮಹಿಳಾ ಮಂಡಳಿಯ ಕಾರ್ಯದರ್ಶಿ ಬಿಂದಿಯಾ ಅಶೋಕ್ ಬೆಟ್ಟಿನ್ ಕೋಶಾಧಿಕಾರಿ ದೇವಕಿ ಸಣ್ಣಯ್ಯ
ಕುಂದಾಪುರ ರಾಮಕ್ಷತ್ರಿಯರ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ರಾಮಕ್ಷತ್ರಿಯ ಯುವಕ ಮಂಡಲದ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು

