ಕುಂದಾಪುರ : ಸಂಘವು 2023-24ನೇ ಸಾಲಿನಲ್ಲಿ 977 ಕೋ. ರೂ. ವ್ಯವಹಾರ ನಡೆಸಿದೆ.ವರ್ಷಾಂತ್ಯಕ್ಕೆ 250 ಕೋ, ರೂ. ಪಾಲು ಬಂಡವಾಳ,164.09 ಕೋ. ರೂ. ಠೇವಣಾತಿ ಹೊಂದಿದೆ.ಸದಸ್ಯರು ಪಡೆದ ಸಾಲ 173.05 ಕೋ. ರೂ. ಹೊರ ಬಾಕಿ ಇದೆ. ದುಡಿಯುವ ಬಂಡವಾಳ 241 ಕೋಟಿ ರೂ. ಇದೆ. ಶೇ. 97.47ರಷ್ಟು ಸಾಲ ಮರುಪಾವತಿಯಾಗಿರುತ್ತದೆ. 3.28 ಕೋ. ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 25 ಡಿವಿಡೆಂಡ್ ನೀಡಲಾಗುವುದು ಎಂದು ಮಾನಂಜೆ ವ್ಯ.ಸೇ.ಸ.ಸಂಘದ ಅಧ್ಯಕ್ಷ ಬಿ. ಪ್ರದೀಪ ಯಡಿಯಾಳ್ ಹೇಳಿದರು.ಅವರು ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಕೇಂದ್ರ ಕಚೇರಿಯ ವಠಾರದಲ್ಲಿ ನಡೆದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಂಘದ ಉಪಾಧ್ಯಕ್ಷ ಸುದೀಪ ಶೆಟ್ಟಿ ನಿರ್ದೇಶಕರಾದ ಎ. ಮಾಧವ ಶೆಣೈ, ಎಸ್. ಶಂಕರನಾರಾಯಣ ಯಡಿಯಾಳ, ಎಂ. ದೇವದಾಸ ಶೆಟ್ಟಿ, ಬಿ. ಮಂಜುನಾಥ ರಾವ್, ಎಂ.ಎಸ್. ವಿಷ್ಣುಮೂರ್ತಿ, ರೋಹಿಣಿ, ಅನಿತಾ, ನರಸಿಂಹ ಪೂಜಾರಿ,ಜಯಂತ ಶೆಟ್ಟಿ ರವೀಂದ್ರ, ಗುರುರಾಜ ನಾಯ್ಕ ದ.ಕ.ಜಿ.ಕೇಂ. ಸಹಕಾರ ಬ್ಯಾಂಕಿನ ವಲಯ ಮೇಲ್ವಿಚಾರಕ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾಗಿ ನಿವೃತ್ತರಾದ ಅರುಣ್ ಕುಮಾರ್ ಎಸ್.ವಿ., ಸಂಘದ ಸದಸ್ಯ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ ಶೆಣೈ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಆಜ್ರಿ ಗೋಪಾಲ ಗಾಣಿಗ ಅವರನ್ನು ಸಮ್ಮಾನಿಸಲಾಯಿತು.ವೈದ್ಯಕೀಯ ಶಿಕ್ಷಣದ ಎಂ ಡಿ ನೀಟ್ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ ಸಂಘದ ಸದಸ್ಯರ ಮಕ್ಕಳಾದ ಅರ್ಜುನ್ ಚಾತ್ರ ಮತ್ತು ಧ್ರುವ ಯಡಿಯಾಳ, ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಶರಣ್ ಕುಮಾರ್ ಶೆಟ್ಟಿ ಅವರನ್ನು ಗೌರವಿಸಲಾಯಿತು. 2023-24 ಸಾಲಿನಲ್ಲಿ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 85ಕ್ಕಿಂತ ಮೇಲ್ಪಟ್ಟು ಅಂಕಗಳಿಸಿದ ಸಂಘದ ಸದಸ್ಯರ 75 ಮಕ್ಕಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಿದರು.ವರದಿ ವರ್ಷದಲ್ಲಿ ಮೃತರಾದ ಸದಸ್ಯರಿಗೆ ಸಂತಾಪ ಸಲ್ಲಿಸಲಾಯಿತು.ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಹಾಗೂ ರಕ್ತನಿಧಿ ಕೇಂದ್ರ ಕುಂದಾಪುರ ಇವರ ಸಹಕಾರದೊಂದಿಗೆ ರಕ್ತದಾನ ಶಿಬಿರ – ಜರಗಿತು. ಸಂಘದ ಜನರಲ್ ಮ್ಯಾನೇಜರ್ ಬಿ. ಮಂಜುನಾಥ ನಾಯ್ಕ್ 2023-24ನೇ ಸಾಲಿನ ವಾರ್ಷಿಕ ವರದಿ ವಾಚಿಸಿದರು. ಮಮತಾ, ಕಾವ್ಯ , ಬ್ರಾಹ್ಮಿ ಪ್ರಾರ್ಥಿಸಿದರು. ಚೆನ್ನ ಪೂಜಾರಿ ಸ್ವಾಗತಿಸಿದರು. ಕೆ. ಗಿರೀಶ ನಿರೂಪಿಸಿ ಕೆ. ಸತೀಶ ಭಟ್ಟ ವಂದಿಸಿದರು.