Home » ಕೋಟದ ಪಂಚವರ್ಣ ಸಂಸ್ಥೆಯ ಪ್ರಜಾಪ್ರಭುತ್ವದ ವಿನೂತನ ಕಾರ್ಯಕ್ರಮ
 

ಕೋಟದ ಪಂಚವರ್ಣ ಸಂಸ್ಥೆಯ ಪ್ರಜಾಪ್ರಭುತ್ವದ ವಿನೂತನ ಕಾರ್ಯಕ್ರಮ

ಪ್ರಜಾಪ್ರಭುತ್ವ ಮಾನವೀಯ ಮೌಲ್ಯಗಳ ರಿಂಗಣ - ಸುರೇಶ್ ಬಂಗೇರ

by Kundapur Xpress
Spread the love

ಕೋಟ: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಸಂವಿಧಾನದ ಆಶಯದಂತೆ ಜನತೆ ಒಂದಾಗಿ ಬಾಳುವ ಮನಸ್ಥಿತಿಯನ್ನು ಸೃಷ್ಢಿಸಿಕೊಳ್ಳಬೇಕಿದೆ ಎಂದು ಕೋಟ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ತಿಳಿಸಿದರು.ಕೋಟದ ಪಂಚವರ್ಣ ಯುವಕ ಮಂಡಲದ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಕೋಟ ಗ್ರಾಮಪಂಚಾಯತ್ ,ಎಸ್‌ಎಲ್‌ಆರ್‌ಎಂ ಘಟಕ ಕೋಟ,ಆಶ್ರಿತ್ ಶಿಕ್ಷಣ ಸಮೂಹ ಸಂಸ್ಥೆ ಕೋಟ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲಾಡಳಿತದ ನಿರ್ದೇಶನದಂತೆ ಅಂತಾರಾಷ್ಟಿçÃಯ ಪ್ರಜಾಪ್ರಭುತ್ವದಿನದ ಅಂಗವಾಗಿ ಮಾನವ ಸರಪಳಿ ಕರೆಕೊಟ್ಟ ಹಿನ್ನಲ್ಲೆಯಲ್ಲಿ ವಾರದ ೨೨೪ನೇ ಪರಿಸರಸ್ನೇಹಿ ಅಭಿಯಾನದ ನಿಮಿತ್ತ ಕೋಟ ಗ್ರಾ.ಪಂ ವ್ಯಾಪ್ತಿಯ ಮಣೂರು ರಾಷ್ಟ್ರಿಯ ಹೆದ್ದಾರಿ ಸ್ವಚ್ಛತೆ ಹಾಗೂ ವನವಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಸಮಾಜದಲ್ಲಿ ಒಗ್ಗಟ್ಟು ಅತ್ಯವಶ್ಯಕ ಆದರೆ ಪ್ರಸ್ತುತ ದಿನಗಳಲ್ಲಿ ಸಂವಿಧಾನದ ಮಹತ್ವ ಅರಿತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಹೆಚ್ಚಿಸಿ ಸಾಮಾಜಿಕ ನ್ಯಾಯ ದೊರಕಿಸಲು ನಾವೆಲ್ಲ ಪ್ರಯತ್ನಿಸೋಣ ಎಂದರು.
ಇದೇ ವೇಳೆ ಕೋಟ ಗ್ರಾ.ಪಂ ಕಾರ್ಯದರ್ಶಿ ಶೇಖರ್ ಮರವಂತೆ ಪ್ರಜಾಪ್ರಭುತ್ವದ ಪ್ರತಿಜ್ಞಾ ವಿಧಿ ಭೋದಿಸಿದರು.
ಪಂಚವರ್ಣ ಯುವಕ ಮಂಡದಿAದ ಮಣೂರು ರಾಷ್ಟಿçÃಯ ಹೆದ್ದಾರಿ ಸ್ವಚ್ಛತೆ,ಮಹಿಳಾ ಮಂಡಲದಿನದ ವನಮಹೋತ್ಸವ ಕಾರ್ಯಕ್ರಮ ಕೋಟ ರಾಷ್ಟಿçÃಯ ಹೆದ್ದಾರಿಯಲ್ಲಿ ಸಂಪನ್ನಗೊಂಡಿತು.ಈ ವೇಳೆ ಪಂಚವರ್ಣದ ಅಧ್ಯಕ್ಷ ಅಜಿತ್ ಆಚಾರ್,ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಉಪಾಧ್ಯಕ್ಷ ಸಂತೋಷ್ ಪೂಜಾರಿ,ಮನೋಹರ್ ಪೂಜಾರಿ,ಸಂಘಟನಾ ಕಾರ್ಯದರ್ಶಿ ಗಿರೀಶ್ ಆಚಾರ್,ಸಂಚಾಲಕ ಅಮೃತ್ ಜೋಗಿ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತ ಪೂಜಾರಿ,ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ,ಸಂಚಾಲಕಿ ಸುಜಾತ ಬಾಯರಿ,ಕಾರ್ಯದರ್ಶಿ ವಸಂತಿ ಹಂದಟ್ಟು, ಉಪಾಧ್ಯಕ್ಷೆ ಪುಷ್ಭಾ ಕೆ.ಹಂದಟ್ಟು,ಎಸ್ ಎಲ್ ಆರ್ ಎಂ ಘಟಕದ ಮುಖ್ಯಸ್ಥೆ ಭವ್ಯ ಮತ್ತಿತರರು ಇದ್ದರು. ಕಾರ್ಯಕ್ರಮವನ್ನು ಕಾರ್ಯಾಧ್ಯಕ್ಷ ರವೀಂದ್ರ ಕೋಟ ನಿರೂಪಿಸಿ ವಂದಿಸಿದರು.

   

Related Articles

error: Content is protected !!