ಕೋಟ : ಇತಿಹಾಸವಿರುವ ಸಾಂಪ್ರದಾಯಿಕ ಮಣೂರು ಕಂಬಳ ಮಹೋತ್ಸವ ಭಾನುವಾರ ಸಂಪನ್ನಗೊಂಡಿತು. ಸಂಜೆ ನಡೆದ ಕಂಬಳ ಮಹೋತ್ಸವದಲ್ಲಿ ಕಂಬಳದ ಅಭಿಮಾನಿಗಳು ಸಹಸ್ರ ಸಂಖ್ಯೆಯಲ್ಲಿ ಕುಳಿತು ವೀಕ್ಷಿಸಿದರು. ಸುಮಾರು 40ಕ್ಕೂ ಅಧಿಕ ಜೋಡಿ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸಿದವು ಪ್ರಸಿದ್ಧ ಮನೆತನವಾದ ಹಂದೆ ಮನೆತನದ ಕೋಣಗಳು ಕಳೆದ ವರ್ಷದಿಂದ ಕಂಬಳದಿಂದ ಅಂತ್ಯ ಕಂಡಿವು.ಇದಾದ ಮೇಲೆ ಹಂಡಿಕೆರೆ ಮನೆತನ,ಗಿರಿಜಾ ಗಾಡಿಕೂಸಣ್ಣ, ಶೀನ ಪೂಜಾರಿ,ಶ್ರೀನಿಧಿ ಮಣೂರು,ಸೇರಿದಂತೆ ಪ್ರಸಿದ್ಧ ಕಂಬಳ ಕೋಣಗಳ ಓಟಗಳು ಡೋಲು, ಚೆಂಡೆ ವಾದನ ನಡುವೆ ಜನಮನ ರಂಜಿಸಿದವು.