ಕೋಟ: ಕೋಟ ಗ್ರಾಮಪಂಚಾಯತ್ ಇದರ ಪ್ರಕೃತಿ ಸಂಜೀವಿನಿ ಒಕ್ಕೂಟದ ಮಹಾಸಭೆ ಗುರುವಾರ ಕೋಟ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಜಿಲ್ಲಾ ತೋಟಗಾರಿಕಾ ಇಲಾಖೆಯ ಹೇಮಂತ ಕುಮಾರ್ ಇಲಾಖೆಯಿಂದ ಸಿಗುವ ಪ್ರಯೋಜಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.
ಸ್ಕೀಲ್ ಡೆವಲಪ್ಮೆಂಟ್ ಬಗ್ಗೆ ಭಾರತೀಯ ವಿಕಾಸ್ ಟ್ರಸ್ಟ್ ನ ರಾಘವೇಂದ್ರ ಆಚಾರ್ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಪ್ರಕೃತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಾಲತಿ ಶೇಖರ್ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ತಾಲೂಕು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಕಲಾವತಿ ಅಶೋಕ್,ಸಂಜೀವಿನಿ ತಾಲೂಕು ಮಟ್ಟದ ವ್ಯವಸ್ಥಾಪಕ ಪ್ರಶಾಂತ್ ,ಪ್ರಕೃತಿ ಸಂಜೀವಿನಿ ಒಕ್ಕೂಟದ ಉಪಾಧ್ಯಕ್ಷೆ ಜಯಲಕ್ಷ್ಮೀ,ಕಾರ್ಯದರ್ಶಿ ಪವಿತ್ರ, ಕೋಟ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಉಪಸ್ಥಿತರಿದ್ದರು. ಒಕ್ಕೂಟದ ಕೃಷಿ ಸಖಿ ಮಮತಾ ಸ್ವಾಗತಿಸಿದರು. ಕಾರ್ಯಕ್ರಮವನ್ನು ಎಂ.ಬಿ.ಕೆ ಪ್ರೇಮ.ಪಿ.ಆಚಾರ್ ನಿರೂಪಿಸಿ ವಾರ್ಷಿಕ ವರದಿಯನ್ನು ಮಂಡಿಸಿದರು.ಎಲ್‍ಸಿಆರ್‍ಪಿ ಭಾರತಿ ವಂದಿಸಿದರು.