ನವದೆಹಲಿ : ಶಿಷ್ಯವೇತನದ ಹಕ್ಕು, ಹಕ್ಕು, ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ, ರೈತರ ಬೆಳೆಗಳಿಗೆ ಕಾನೂನು ಖಾತರಿ, ಕಡು ಬಡ ಮಹಿಳೆಯರಿಗೆ ವಾರ್ಷಿಕ 1 ಲಕ ರು. ನೀಡಿಕೆ, ದೇಶದ ಎಲ್ಲರಿಗೂ 25 ಲಕ್ಷ ರು. ಆರೋಗ್ಯ ವಿಮೆ. ಎಸ್‌ಸಿ-ಎಸ್‌ಟಿ ಮತ್ತು ಒಬಿಸಿಗಳ ಮೀಸಲಾ ತಿಯ ಮಿತಿ ಹೆಚ್ಚಿಸಲು ಶೇ.50 ಮೀಸಲಾತಿ ಮಿತಿ ರದ್ದುಪಡಿಸುವುದು. ರಾಷ್ಟ್ರ ವ್ಯಾಪಿ ಜಾತಿ-ಆರ್ಥಿಕ ಗಣತಿ ಮತ್ತು ಅಗ್ನಿಪಥ್ ಯೋಜನೆ ರದ್ದುಗೊಳಿಸು ವುದು.. ಇವು ಶುಕ್ರವಾರ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಲೋಕಸಭಾ ಪ್ರಣಾಳಿಕೆಯಲ್ಲಿ ನೀಡಿರುವ ಚುನಾವಣೆಯ ಪ್ರಮುಖ ಭರವಸೆಗಳು.
ಐದು ‘ನ್ಯಾಯದ ಆಧಾರ ಸ್ತಂಭಗಳು’ ಮತ್ತು ಅವುಗಳ ಅಡಿಯಲ್ಲಿ 25 ಖಾತರಿಗಳ ಮೇಲೆ ಗಮನ ಕೇಂದ್ರೀಕರಿಸಿದ ಪ್ರಣಾಳಿಕೆಯನ್ನು ಎಐಸಿಸಿ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಮಾಜಿ ಮುಖ್ಯಸ್ಥರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಬಿಡುಗಡೆ ಮಾಡಿದರು. ಖರ್ಗೆ, ರಾಹುಲ್ ಮತ್ತು ಭಾರತ್ ಜೋಡೋ ಯಾತ್ರೆಗಳ ಚಿತ್ರಗಳನ್ನು ಒಳಗೊಂಡಿರುವ ‘ನ್ಯಾಯಪತ್ರ’ ಶೀರ್ಷಿಕೆಯ 45 ಪುಟಗಳ ದಾಖಲೆಯಲ್ಲಿ ಹಲವಾರು ಮಹತ್ವದ ಘೋಷಣೆಗಳನ್ನು ಮಾಡಲಾಗಿದೆ.