ಕೋಟ: ಮಳೆಗಾಲದಲ್ಲಿ ಬಾರಿ ಪ್ರಮಾಣದಲ್ಲಿ ಗಾಳಿ ಮಳೆ ಸಂಭವಿಸಿದಾಗ ವಿದ್ಯುತ್ ತಂತಿಗಳು ನೆಲಕ್ಕುರುಳಿ ಸಾಕಷ್ಟು ಹಾನಿಯುಂಟು ಮಾಡುತ್ತವೆ ಈ ಹಿನ್ನಲ್ಲೆಯಲ್ಲಿ ಕೋಟದ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ ನೇತೃತ್ವದ ಸಕಡ್ ಫೌಂಡೇಶನ್ ಮೂಲಕ ಕೋಟದ ಪಂಚವರ್ಣ ಸಂಸ್ಥೆಯ ಸಹಯೋಗದೊಂದಿಗೆ ಕೋಟ ಮೆಸ್ಕಾಂ ಉಪ ವಿಭಾಗದ ಸಭೆಯಲ್ಲಿ ಕೇಬಲ್ ಗ್ರಿಪರ್ ಅನ್ನು ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ನರಸಿಂಹ ಪಂಡಿತ್ ಹಸ್ತಾಂತರಿಸಿದರು.
ಸಕಡ್ ಫೌಂಡೇಶನ್ ಮುಖ್ಯಸ್ಥ ಕೋಟ ಶ್ರೀಕಾಂತ್ ಶೆಣೈ,ಕೋಟ ಪಂಚವರ್ಣ ಸಂಸ್ಥೆಯ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಉಪಾಧ್ಯಕ್ಷ ರವೀಂದ್ರ ಜೋಗಿ,ಸದಸ್ಯರಾದ ದಿನೇಶ್ ಆಚಾರ್,ಶಶಿಧರ ತಿಂಗಳಾಯ,ಪಾಂಡೇಶ್ವರ ಗ್ರಾಮಪಂಚಾಯತ್ ಸದಸ್ಯ ಪ್ರತಾಪ್ ಶೆಟ್ಟಿ ಸಾಸ್ತಾನ,ಸಾಮಾಜಿಕ ಕಾರ್ಯಕರ್ತ ನಾಗರಾಜ್ ಗಾಣಿಗ ಸಾಲಿಗ್ರಾಮ, ಬಿಜೆಪಿ ಮುಖಂಡರಾದ ಐರೋಡಿ ವಿಠ್ಠಲ ಪೂಜಾರಿ, ಸುರೇಶ್ ಕುಂದರ್,ರಾಘವೇಂದ್ರ ಐರೋಡಿ ಮತ್ತಿತರರು ಇದ್ದರು.