ಕೋಟ : ಚೇಂಪಿ ಹಾಲು ಉತ್ಪಾದಕರ ಸಹಕಾರಿ ಸಂಘ ಚೇಂಪಿ ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಕಛೇರಿಯಲ್ಲಿ ಇತ್ತೀಚೆಗೆ ಜರುಗಿತು.ಸಭೆಯಲ್ಲಿ ಸಂಘಕ್ಕೆ ಹೆಚ್ಚು ಹಾಲು ನೀಡಿದ ಸದಸ್ಯರಾದ ರಾಮ ಮಧ್ಯಸ್ಥ, ಉದಯ ಪೂಜಾರಿ,ಬೇಬಿ ಪೂಜಾರ್ತಿ ಇವರನ್ನು ಗೌರವಿಸಲಾಯಿತು.ಸಂಘದ ವಿಸ್ತರಣಾಧಿಕಾರಿ ಸರಸ್ವತಿ ಅವರು ಮಾತನಾಡಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸದಸ್ಯರ ಸಹಕಾರವನ್ನು ಕೋರಿದರು
ಸಂಘದ ನಿರ್ದೇಶಕರಾದ ರಾಮ ಮರಕಾಲ, ಶಿವಾನಂದ ಮರಕಾಲ, ವಿಠಲ ಶೆಟ್ಟಿಗಾರ್, ಬಾಬು ಗಾಣಿಗ , ಸುರೇಶ ಪೂಜಾರಿ, ಯಶೋದ ಭಂಡಾರಿ, ವಿಜಯ ಹೊಳ್ಳ,ಶಾಂತ,ಬೇಬಿ ಪೂಜಾರಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ನಾಗೇಶ ಮಯ್ಯ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಐತಾಳ ವರದಿ ವಾಚಿಸಿದರು. ಸಂಘದ ಅಧ್ಯಕ್ಷ ಜಿ ಆಸ್ತೀಕ ಶಾಸ್ತ್ರೀ ಅವರು ಕಾರ್ಯಕ್ರಮ ನಿರೂಪಿಸಿದರು.