ಕುಂದಾಪುರ :ಕೇರಳದಿಂದ ಬ್ರಹ್ಮಾವರಕ್ಕೆ ಬಂದು ಭಾವಿಯ ರಿಂಗ್ ಕೆಲಸ ಮಾಡುತ್ತಿದ್ದ ಶಿವನ ಕುಟ್ಟಿ 57 ವರ್ಷ ಎಂಬವರು ತನ್ನ ಮನೆ ಕೇರಳಕ್ಕೆ ಹೋಗುತ್ತೇನೆಂದು ಹೇಳಿ ಕೇರಳಕ್ಕೂ ಹೋಗದೆ ಮನೆಗೂ ಬಾರದೆ ನಾಪತ್ತೆಯಾಗಿರುವುದಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಶಿವನಕುಟ್ಟಿ ಎಂಬವರು ಒಂದು ತಿಂಗಳಿನಿಂದ ಬ್ರಹ್ಮಾವರದಲ್ಲಿ ಭಾವಿಯ ರಿಂಗ್ ಕೆಲಸ ಮಾಡುತ್ತಿದ್ದು 15 ದಿವಸದ ಹಿಂದುಗಡೆ ಅವರು ಹುಚ್ಚುನಾಯಿ ಕಡಿತಕ್ಕೆ ಒಳಗಾಗಿದ್ದರು. ತದನಂತರ ಮಧ್ಯಪಾನವನ್ನು ತ್ಯಜಿಸಿದ್ದರಿಂದ ಸ್ವಲ್ಪ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದರು ಈ ಬಗ್ಗೆ ಬ್ರಹ್ಮವರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ