ಕಾರ್ಕಳ : ಮಂಗಳೂರಿನ ಬಿಜೈಯಲ್ಲಿರುವ ತನ್ನ ಮನೆಯಿಂದ ವಾರದ ಹಿಂದೆ ನಾಪತ್ತೆಯಾಗಿದ್ದ ಕೆಲಿಸ್ತಾ ಫೆರಾವೊ (18ವರ್ಷ) ಎಂಬ ಯುವತಿ ಕಾರ್ಕಳದ ಯುವಕನ ಮನೆಯಲ್ಲಿ ಪತ್ತೆಯಾಗಿದ್ದಾಳೆ.
ಈಕೆ ಜು. 30 ರಂದು ತನ್ನ ಮನೆಯವರಲ್ಲಿ ಹೇಳದೆ ನಾಪತ್ತೆಯಾಗಿದ್ದಳು. ಈ ಕುರಿತು ಆಕೆಯ ಮನೆಯವರು ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಬರ್ಕೆ ಪೊಲೀಸರು ಯುವತಿಯ ಪತ್ತೆಗೆ ಕಾರ್ಯಾಚರಣೆ ಆರಂಭಿಸಿ ಯುವತಿಯ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ ವೇಳೆ ಆಕೆ ರಿಕ್ಷಾದಲ್ಲಿ ತೆರಳಿರುವುದು ಪತ್ತೆಯಾಗಿತ್ತು. ಅಲ್ಲದೆ ಆಕೆ ಮೊಬೈಲ್ನಲ್ಲಿ ಪಬ್ಜಿ ಆನ್ಲೈನ್ ಆಟವಾಡುವ ಹವ್ಯಾಸ ಹೊಂದಿದ್ದಳು. ಅದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ವೇಳೆ ಕಾರ್ಕಳ ತಾಲೂಕಿನ ಗಜೇಂದ್ರ ಬೈಲ್ನ ಸೂರಜ್ ಪೂಜಾರಿ (23) ಮನೆಯಲ್ಲಿ ಯುವತಿ ಇರುವ ಮಾಹಿತಿಯ ಆಧಾರದ ಮೇಲೆ ಅಲ್ಲಿಗೆ ತೆರಳಿದ ಬರ್ಕೆ ಪೊಲೀಸರ ತಂಡ ಇಬ್ಬರನ್ನೂ ಠಾಣೆಗೆ ಕರೆತಂದು ವಿಚಾರಿಸಿದರು. ಈ ವೇಳೆ ಇಬ್ಬರು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಯುವತಿ ಪೋಷಕರ ಜೊತೆ ಇರಲು ಒಪ್ಪದ ಹಿನ್ನೆಲೆಯಲ್ಲಿ ಆಕೆಯನ್ನು ಸ್ವಾಧಾರ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.