Home » ಐತಾಳರ ಸಾಧನೆ ಮುಂದಿನ ಪೀಳಿಗೆಗೆ ದಾರಿದೀಪ -ಡಾ.ವಿಜಯ ಬಲ್ಲಾಳ್
 

ಐತಾಳರ ಸಾಧನೆ ಮುಂದಿನ ಪೀಳಿಗೆಗೆ ದಾರಿದೀಪ -ಡಾ.ವಿಜಯ ಬಲ್ಲಾಳ್

ಪಾರಂಪಳ್ಳಿ ನರಸಿಂಹ ಐತಾಳರಿಗೆ ಹುಟ್ಟೂರು ಸಾಧಕ ಶ್ರೀ ಪ್ರಶಸ್ತಿ ಪ್ರದಾನ

by Kundapur Xpress
Spread the love

ಕೋಟ : ಪಾರಂಪಳ್ಳಿ ನರಸಿಂಹ ಐತಾಳರು ಸಾಹಿತ್ಯ, ಸಂಗೀತ, ನೃತ್ಯ, ಸಂಘಟನೆ, ರಂಗಭೂಮಿ, ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದವರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಐತಾಳರ ಸಾಧನೆ ಅನನ್ಯ ಇಂದಿನ ಯುವ ಸಮೂಹಕ್ಕೆಅವರ ಸಾಧನೆ ದಾರಿದೀಪ ಅಲ್ಲದೆ ಮಕ್ಕಳ ಸ್ನೇಹಿಯಾಗಿ ಅವರು ನೀಡಿರುವ ಚಟುವಟಿಕೆಗಳು ಅನನ್ಯ. ಸುಪ್ರಭಾತ ಐತಾಳರೆಂದೇ ಪ್ರಸಿದ್ಧರಾಗಿರುವ ಅವರ ಸಾಧನೆಗಳು ವಿಶ್ವಕ್ಕೆ ಪ್ರಚಲಿತಗೊಳ್ಳಲಿ ಎಂದು ಅಂಬಲಪಾಡಿ ದೇಗುಲದ ಧರ್ಮದರ್ಶಿ ಡಾ. ವಿಜಯ ಬಲ್ಲಾಳ್ ಅಭಿಪ್ರಾಯಪಟ್ಟರು.
ಇತ್ತೀಚಿಗೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಿತ್ರ ಮಂಡಳಿ ಕೋಟ ಇವರ ಸಂಯುಕ್ತ ಆಶ್ರಯದಲ್ಲಿ ಕೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಹುಟ್ಟೂರು ಸಾಧಕ ಶ್ರೀ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದರು.
ಮಿತ್ರ ಮಂಡಳಿ ಅಧ್ಯಕ್ಷ ಉಪೇಂದ್ರ ಸೋಮಯಾಜಿ ಪ್ರಾಸ್ತವಿಕ ಮಾತನಾಡಿ ಸ್ವಾಗತಿಸಿದರು. ಮಿತ್ರ ಮಂಡಳಿಯ ಗಿಳಿಯಾರು ಶ್ರೀನಿವಾಸ ಅಡಿಗ ಅಭಿನಂದನಾ ಭಾಷಣ ಮಾಡಿದರು.
ಪಾರಂಪಳ್ಳಿ ನರಸಿಂಹ ಐತಾಳರ ಬದುಕು ಬರಹ ಕೃತಿಗಳ ಕುರಿತು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕವಯಿತ್ರಿ ಸುಮನಾ ಹೇರ್ಳೆ, ನಿವೃತ್ತ ಮುಖ್ಯ ಶಿಕ್ಷಕ ಶ್ರೀಪತಿ ಹೇರ್ಳೆ, ಕೋಟ ವಿದ್ಯಾಸಂಸ್ಥೆಯ ಸಹಕಾರ್ಯದರ್ಶಿ ಪಿ. ಮಂಜುನಾಥ ಉಪಾಧ್ಯ ಮಾತನಾಡಿದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಮನೋಹರ ಪಿ., ಮಿತ್ರ ಮಂಡಳಿಯ ರಂಗಪ್ಪಯ್ಯ ಹೊಳ್ಳ, ಶ್ರೀನಿವಾಸ ಉಪಾಧ್ಯ, ಶ್ರೀದೇವಿ ಹಂದೆ, ಶ್ರೀಮತಿ ವಿಜಯಲಕ್ಷಿö್ಮÃ, ಮುಖ್ಯ ಶಿಕ್ಷಕ ನಾಗೇಶ ಮಯ್ಯ, ಪಾರಂಪಳ್ಳಿ ನರಸಿಂಹ ಐತಾಳರ ಅಭಿಮಾನಿಗಳು, ಹಿತೈಷಿಗಳು, ಬಂಧುಗಳು, ಕಸಾಪ ಉಡುಪಿ ಜಿಲ್ಲೆ, ಮಿತ್ರ ಮಂಡಳಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಶ್ರೀಮತಿ ಶ್ರೀದೇವಿ ಹಂದೆ ಪ್ರಾರ್ಥಿಸಿದರು. ಬ್ರಹ್ಮಾವರ ತಾಲೂಕು ಕಸಾಪ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು

 

Related Articles

error: Content is protected !!