Home » “ಒತ್ತಡ ಜಾಗೃತಿ ದಿನಾಚರಣೆ” ಕಾರ್ಯಕ್ರಮ
 

“ಒತ್ತಡ ಜಾಗೃತಿ ದಿನಾಚರಣೆ” ಕಾರ್ಯಕ್ರಮ

by Kundapur Xpress
Spread the love

ಮೂಡ್ಲಕಟ್ಟೆ : ನರ್ಸಿಂಗ್ ಕಾಲೇಜು ಮಾನಸಿಕ ಆರೋಗ್ಯ ಮತ್ತು ಒತ್ತಡ ನಿರ್ವಹಣೆಯ ಜಾಗೃತಿಯನ್ನು ಉತ್ತೇಜಿಸುವ ಉದ್ದೇಶದಿಂದ, ಡಾ. ಎ.ವಿ. ಬಾಲಿಗಾ ಮೆಮೋರಿಯಲ್ ಆಸ್ಪತ್ರೆಯ ಘಟಕವಾದ ಅಭಯ ಮಾನಸಿಕ ಪುನರ್ವಸತಿ ಕೇಂದ್ರದಲ್ಲಿ “ಒತ್ತಡ ಜಾಗೃತಿ ದಿನಾಚರಣೆ” ಕಾರ್ಯಕ್ರಮವನ್ನು ಆಯೋಜಿಸಿತು. ಈ ಕಾರ್ಯಕ್ರಮವು ಪ್ರಾಂಶುಪಾಲೆ ಪ್ರೊ. ಜೆನ್ನಿಫರ್ ಫ್ರೀಡಾ ಮೆನೆಜಸ್ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಕಾರ್ಯಕ್ರಮವು ದೀಪಪ್ರಜ್ವಲನೆಯೊಂದಿಗೆ ಆರಂಭವಾಯಿತು. ದೀಪಪ್ರಜ್ವಲನೆಯನ್ನು ಅಭಯ ಪುನರ್ವಸತಿ ಕೇಂದ್ರದ ಶ್ರೀಮತಿ ಮೈತ್ರಿ ಶೆಟ್ಟಿ ಹಾಗೂ ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಸಹಾಯಕ ಉಪನ್ಯಾಸಕಿ ಶ್ರೀಮತಿ ಚೇತನಾ ಆರ್. ಅವರು ನೆರವೇರಿಸಿದರು. ಕುಮಾರಿ ಸಿನ್ಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಕುಮಾರಿ ಟೆಸ್ಕಾ 2025ರ ಧ್ಯೇಯವಾದ “ದೀರ್ಘಕಾಲಿಕ ಒತ್ತಡ ನಿರ್ವಹಣೆಯ ಮೂಲಕ ಉದ್ಯೋಗಿಗಳ ಕಲ್ಯಾಣವನ್ನು ಅತ್ಯುತ್ತಮಗೊಳಿಸುವುದು” ಕುರಿತು ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳು ಧ್ಯಾನ, ಯೋಗ, ಕಲಾ ಹಾಗೂ ಕ್ರಾಫ್ಟ್ ಥೆರಪಿ ಮತ್ತು ಸಂಗೀತ ವಿಶ್ರಾಂತಿಯಂತಹ ಚಟುವಟಿಕೆಗಳ ಮೂಲಕ ಸಮಗ್ರ ಒತ್ತಡ ನಿರ್ವಹಣೆಯ ವಿಧಾನಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಪುನರ್ವಸತಿ ಕೇಂದ್ರದ ಸದಸ್ಯರ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು ಹಾಗೂ ದಿನನಿತ್ಯದ ಜೀವನದಲ್ಲಿ ಆರೋಗ್ಯಕರ ಒತ್ತಡ ನಿರ್ವಹಣೆ ಕುರಿತು ಜಾಗೃತಿ ಮೂಡಿಸಲಾಯಿತು.

 

Related Articles

error: Content is protected !!