Home » ನಾಗರಾಜ್‌ ಕಾಮಧೇನು ತಂಡಕ್ಕೆ ಪ್ರಚಂಡ ಗೆಲುವು
 

ನಾಗರಾಜ್‌ ಕಾಮಧೇನು ತಂಡಕ್ಕೆ ಪ್ರಚಂಡ ಗೆಲುವು

by Kundapur Xpress
Spread the love

ಕುಂದಾಪುರ : ಕುಂದಾಪುರ ನಗರದ ಪ್ರತಿಷ್ಠಿತ ಶ್ರೀ ರಾಮ ಕ್ರೆಡಿಟ್‌ ಕೋ-ಅಪರೇಟಿವ್‌ ಸೊಸೈಟಿಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ನಾಗರಾಜ್‌ ಕಾಮಧೇನು ತಂಡಕ್ಕೆ ಅಭೂತಪೂರ್ವ ಗೆಲುವು ದೊರಕಿದೆ

ನಾಗರಾಜ್ ಕಾಮಧೇನು ತಂಡದಲ್ಲಿನ ಸಾಮಾನ್ಯ ವರ್ಗದಲ್ಲಿ ಅಜೇಯ ಹವಲ್ದಾರ್‌,ಕೆ ಅಶೋಕ್‌ ಬೆಟ್ಟಿನ್,  ಕೃಷ್ಣಯ್ಯ ಪಿ ಮುದ್ದೋಡಿ, ಎಂ ಜಿ ರಾಜೇಶ್‌, ಬಿ ಶೀಧರ್‌ ಬೇಲಿಮನೆ, ಶ್ರೀಧರ್‌ ಪಿ ಎಸ್‌ (ಸಿರಿ), ಸತೀಶ ನರಸಿಂಹ ಶೇರೆಗಾರ್‌ (ಕಾವೇರಿ), ಹಾಗೂ ಕೆ.ಸೂರ್ಯಕಾಂತ್‌ (ಆದರ್ಶ) ಸ್ಪರ್ಧಿಸಿದ್ದರು ಹಿಂದುಳಿದ ವರ್ಗ ಏ ಯಲ್ಲಿ ಬಿ. ರಾಧಾಕೃಷ್ಣ ನಾಯಕ್‌ ( ರೂಪಮ್)‌ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ

ಶ್ರೀ ರಾಮ ಕ್ರೆಡಿಟ್‌ ಕೋ-ಅಪರೇಟಿವ್‌ ಸೊಸೈಟಿಯ ಆಡಳಿತ ಮಂಡಳಿಗೆ ಸಾಮಾನ್ಯ ವರ್ಗದಲ್ಲಿ 11 ಮಂದಿ ಸ್ಪರ್ಧಿಸಿದ್ದು ಸಾಮಾನ್ಯ ವರ್ಗ ಬಿ ಯಲ್ಲಿ ಇಬ್ಬರು ಸ್ಪರ್ಧಿಸಿದ್ದರು ಒಟ್ಟು ಸ್ಪರ್ಧಿಸಿದ 13 ಮಂದಿಯಲ್ಲಿ ನಾಗರಾಜ್‌ ಕಾಮದೇನು ತಂಡದ 10 ಮಂದಿ ವಿಜಯಶಾಲಿಯಾಗಿದ್ದು ಮಹಿಳಾ ಕ್ಷೇತ್ರದಲ್ಲಿ ಇಬ್ಬರು ಮಹಿಳೆಯರಾದ ಶ್ರೀಮತಿ ರಶ್ಮೀರಾಜ್‌ ಹಾಗೂ ಶ್ರೀಮತಿ ಶಾರದ ವಿಜಯ್‌ ಕುಮಾರ್‌ ಅವಿರೋಧವಾಗಿ ಆಯ್ಕೆಗೊಂಡಿದ್ದರು

ರಿಟರ್ನಿಂಗ್‌ ಅಧಿಕಾರಿಯಾಗಿ ಶ್ರೀಮತಿ ಸುಕನ್ಯಾ ಹಾಗೂ ಶ್ರೀ ರಾಮ ಕ್ರೆಡಿಟ್‌ ಕೋ-ಅಪರೇಟಿವ್‌ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ ರಾಘವೇಂದ್ರ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು

ಅಭ್ಯರ್ಥಿಗಳು ಪಡೆದ ಮತ

1 ಅಜೇಯ ಹವಾಲ್ದಾರ್ – 1155

2 ಕೆ. ಅಶೋಕ ಬೆಟ್ಟಿನ್ – 1066

3 ಕೃಷ್ಣಯ್ಯ ವಿ. ಮದ್ದೋಡಿ – 979

4 ಕೆ. ನಾಗರಾಜ ರಾವ್ (ಕಾಮಧೇನು) – 1222

5 ನಿತ್ಯಾನಂದ ಕೆ.ಜಿ – 589

6 ಎನ್. ಪ್ರಭಾಕರ – 487

7 ಎಂ.ಜಿ. ರಾಜೇಶ್ – 1064

8 ಬಿ. ಶ್ರೀಧರ – 1089

9 ಶ್ರೀಧರ ಪಿ.ಎಸ್. – 1056

10 ಸತೀಶ ನರಸಿಂಹ ಶೇರೆಗಾರ (ಕಾವೇರಿ) – 1087

11 ಕೆ. ಸೂರ್ಯಕಾಂತ – 1007

ಹಿಂದುಳಿದ ಪ್ರವರ್ಗ ‘ಎ’ ಮೀಸಲು

1 ಬಿ. ರಾಧಾಕೃಷ್ಣ ನಾಯಕ್ (ರೂಪಂ) – 873

3 ಕೆ. ಸುಧಾಕರ – 505

 

Related Articles

error: Content is protected !!