ನವದೆಹಲಿ : ಕಾಂಗ್ರೆಸಿಗರು ಸ್ವಹಿತಾಸಕ್ತಿಗೆ ನಾಚಿಕೆಬಿಟ್ಟು ಇತರರಿಂದ ಬದ್ದತೆ ನಿರೀಕ್ಷಿಸುತ್ತಾರೆ. ಆದರೆ ರಾಷ್ಟ್ರದ ಬಗ್ಗೆ ಅವರಿಗೆ ಪ್ರೀತಿಯೂ ಇಲ್ಲ ಬದ್ಧತೆಯೂ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ನಿರ್ದಿಷ್ಟ ಹಿತಾಸಕ್ತಿ ಗುಂಪೊಂದು ಮುಖ್ಯವಾಗಿ ಭ್ರಷ್ಟಾಚಾರದ ಆರೋಪವಿರುವ ರಾಜಕಾರಣಿಗಳಿಗೆ ಸಂಬಂಧಪಟ್ಟ ಪ್ರಕರಣಗಳ ತೀರ್ಪು, ಕೆಲ ರಾಜಕಾರಣಿಗಳ ಪರವಾಗಿ ಬರುವಂತೆ, ನ್ಯಾಯಾಂಗದ ಮೇಲೆ ಒತ್ತಡ ತಂತ್ರ ಹೇರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿ ಹಿರಿಯ ವಕೀಲ ಹರೀಶ್ ಸಾಳ್ವೆ, ಬಾರ್ ‘ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಸಹಿತ 600ಕ್ಕೂ ಅಧಿಕ ವಕೀಲರು, ಸಿಜೆಐ ಡಿ.ವೈ.ಚಂದ್ರಚೂಡ್ ಅವರಿಗೆ ಲಿಖಿತ ದೂರು ಸಲ್ಲಿಸಿರುವ ಬೆನ್ನಲ್ಲೇ, ಮೋದಿ ಕಾಂಗ್ರೆಸಿಗರನ್ನು ತರಾಟೆಗೆತ್ತಿಕೊಂಡಿದ್ದಾರೆ. ಕಾಂಗ್ರೆಸ್‌ನದು ವಿಂಟೇಜ್ ಸಂಸ್ಕೃತಿ, ಇತರರನ್ನು ದಬಾಯಿಸುವುದು, ಬೆದರಿಸುವುದು ಮತ್ತು ಸ್ವಾರ್ಥಕ್ಕಾಗಿ ನಾಚಿಕೆಬಿಟ್ಟು ಇತರರಿಂದ ಬದ್ಧತೆ ಅಪೇಕ್ಷಿಸುವುದು ಕಾಂಗ್ರೆಸ್ ಜಾಯಮಾನ ಎಂದು ಎಕ್ಸ್‌ನಲ್ಲಿ ಹಾಕಿರುವ ಪೋಸ್ ನಲ್ಲಿ ಆರೋಪಿಸಿದ್ದಾರೆ