ನವದೆಹಲಿ : ಹಿಂದಿನ ದುರ್ಬಲ ಕಾಂಗ್ರೆಸ್ ಸರ್ಕಾರಗಳು ಗಡಿಯಲ್ಲಿ ಮೂಲಸೌಕರ್ಯಗಳನ್ನು ಬಲಪಡಿಸಲು ವಿಫಲವಾಗಿದ್ದವು. ಆದರೆ ಬಿಜೆಪಿ ನೇತೃತ್ವದ ಬಲಿಷ್ಠ ಸರ್ಕಾರದಡಿ ಭದ್ರತಾ ಪಡೆಗಳು ಭಯೋತ್ಪಾದಕರನ್ನು ಅವರ ನೆಲೆಯಲ್ಲೇ ನಾಶಪಡಿಸುವಲ್ಲಿ ಸಫಲವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನಗರದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಸ್ಥಿರ ಸರ್ಕಾರದ ಪ್ರಯೋಜನಗಳೇನೆಂಬುದು ದೇಶದ ಜನರಿಗೆ ಅರಿವಾಗಿದೆ. ಹಾಗಾಗೇ ದೇಶಾದ್ಯಂತ ಮತ್ತೊಂದು ಬಾರಿ ಮೋದಿ ಸರ್ಕಾರ (ಫಿರ್ ಏಕ್ ಬಾರ್ ಮೋದಿ ಸರ್ಕಾರ್) ಘೋಷಣೆಗಳು ಅನುರಣಿಸುತ್ತಿವೆ ಎಂದರು.