Home » ಬೆಂಗಳೂರಿನಲ್ಲಿ ಮೋದಿ ಪ್ರಚಾರ ಸಭೆ
 

ಬೆಂಗಳೂರಿನಲ್ಲಿ ಮೋದಿ ಪ್ರಚಾರ ಸಭೆ

by Kundapur Xpress
Spread the love

ಬೆಂಗಳೂರು: ಭಾರತದಲ್ಲಿ ನಗರೀಕರಣ ವೇಗ ಪಡೆದಿದ್ದು, ನಗರದಲ್ಲಿ ವಾಸಿಸುವ ಬಡವರು ಮತ್ತು ಮಧ್ಯಮವರ್ಗದವರ ಜೀವನದ ಗುಣಮಟ್ಟ ಸುಧಾರಿಸಲು ಎನ್‌ಡಿಎ ಸರ್ಕಾರವು ಸಾಮಾಜಿಕ, ಭೌತಿಕ ಮತ್ತು ಡಿಜಿಟಲ್‌ನ ಮೂಲಸೌಕರ್ಯಗಳಿಗಾಗಿ ದಾಖಲೆಯ ಹೂಡಿಕೆ ಮಾಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

‘ಶನಿವಾರ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಬಡ ಕುಟುಂಬದಿಂದ ನಾನು ಬಂದಿದ್ದೇನೆ. ಬಡತನದ ಬಗ್ಗೆ ಅರಿವಿದೆ. ಜನರಿಗೆ ಉತ್ತಮ ಮೂಲಸೌಕರ್ಯ ಕೊಡಲು ನಾವು ಬದ್ಧತೆ ಪ್ರದರ್ಶಿಸಿದ್ದು, ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ನಗರ ಪ್ರದೇಶದ ಬಡವರಿಗೆ 1 ಕೋಟಿ ಮನೆಗಳನ್ನು ಕೊಡಲಾಗಿದೆ. ಇದರಲ್ಲಿ 84 ಸಾವಿರ ಮನೆಗಳು ಬೆಂಗಳೂರಿಗೆ ಸಿಕ್ಕಿವೆ ಎಂದರು.

ಮಧ್ಯಮ ವರ್ಗದವರ ಸ್ವಂತ ಮನೆಯ ಕನಸು ಪೂರ್ಣಗೊಳಿಸಲಾಗಿದೆ, ಇದಕ್ಕಾಗಿ ಮನೆ ಸಾಲದ ಬಡ್ಡಿಗೆ ಸಹಾಯ ಧನ ನೀಡಲಾಗಿದೆ. ಹೀಗೆ ಮಧ್ಯಮವರ್ಗದವರ 60 ಸಾವಿರ ಕೋಟಿ ರೂ.ಗಳನ್ನು ಉಳಿತಾಯ ಮಾಡಲಾಗಿದೆ. ಬಡ ಮತ್ತು ಮಧ್ಯಮವರ್ಗದ ಜನರ ಮನೆಗಳು ಅಪೂರ್ಣವಾಗಬಾರದು, ಅವರ ಮನೆಯ ಕನಸುಗಳು ಒಡೆಯಬಾರದು. ಇದಕ್ಕಾಗಿ ಎನ್ ಡಿಎ ಸರ್ಕಾರ ರೇರಾ ಕಾಯ್ದೆ ತಂದಿದೆ. ಇವತ್ತು ಬೆಂಗಳೂರಿನಲ್ಲಿ 3000ಕ್ಕೂ ಅಧಿಕ ವಸತಿ ಯೋಜನೆಗಳು ರೇರಾ ಕಾನೂನಿನಲ್ಲಿ ಪ್ರಗತಿಯಲ್ಲಿವೆ ಎಂದು ವಿವರಿಸಿದರು.

   

Related Articles

error: Content is protected !!