ಬಾಗಲಕೋಟೆ : ಕರ್ನಾಟಕ ಸರ್ಕಾರ ವಸೂಲಿಗೆ ನಿಂತಿದೆ. ಕರ್ನಾಟಕವನ್ನು ಕಾಂಗ್ರೆಸ್ ಟ್ಯಾಂಕರ್ ಹಬ್ ಮಾಡಿಕೊಂಡಿದೆ. ಕರ್ನಾಟಕದಲ್ಲಿ ಟ್ಯಾಂಕರ್ ದಂಧೆ ನಡೆಯುತ್ತಿದೆ. ಕಾಂಗ್ರೆಸ್ ಲೂಟಿ ಮಾಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ಬಾಗಲಕೋಟೆಯ ನವನಗರದ ತೋಟಗಾರಿಕೆ ವಿವಿ ಸಮೀಪದ ನೂರು ಎಕರೆ ಜಾಗದಲ್ಲಿ ನಡೆದ ಬಾಗಲಕೋಟೆಯ ಪಿ.ಸಿ.ಗದ್ದಿಗೌಡರ, ವಿಜಯಪುರದ ರಮೇಶ ಜಿಗಜಿಣಗಿ ಪರ ಮತಯಾಚಿಸುವ ಬಹಿರಂಗ ಸಭೆ ಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ನವರಿಗೆ ಬಡವರ ಬಗ್ಗೆ ಕಾಳಜಿನೇ ಇಲ್ಲ ದೇಶದಲ್ಲಿ ಕಾಂಗ್ರೆಸ್ ವಿಕಸಿತ ಭಾರತದ ವಿರೋಧಿಯಾಗಿದೆ ಎಂದು ಬಣ್ಣಿಸಿದರು.